ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಐಪಿಎಲ್ 2025 ರ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲು ಅನುಭವಿಸಿದ್ದರಿಂದ ಮುಂಬೈ ಇಂಡಿಯನ್ಸ್ (ಎಂಐ) ನಾಯಕ ಹಾರ್ದಿಕ್ ಪಾಂಡ್ಯ ಭಾವುಕರಾದರು.
ಸೋಲಿನಿಂದ ಕುಗ್ಗಿರುವ ಹಾರ್ದಿಕ್ ಪಾಂಡ್ಯ ಅವರನ್ನು ಸಹೋದರ ಮತ್ತು ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರು ತಪ್ಪಿಕೊಂಡು ಸಮಾಧಾನ ಪಡಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸೋಲಲು ಕೃನಾಲ್ ಪಾಂಡ್ಯ ಅವರೇ ಕಾರಣರಾಗಿದ್ದರು. ತಮ್ಮ ಅದ್ಭುತ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಆಟಗಾರರನ್ನು ಕೃನಾಲ್ ಪಾಂಡ್ಯ ಕಟ್ಟಿಹಾಕಿದರು.
ಈ ಮೂಲಕ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲಿನಿಂದ ಟೇಬಲ್ ಪಾಯಿಂಟ್ಸ್‌ನಲ್ಲಿ 8ಸ್ಥಾನದಲ್ಲಿದೆ. ಈ ಸೋಲನ್ನು ಅರಗಿಸಿಕೊಳ್ಳದ ಸ್ಥಿತಿಯಲ್ಲಿದ್ದ ತಮ್ಮ ಹಾರ್ದಿಕ್‌ನನ್ನು ಅಣ್ಣ ಕೃನಾಲ್ ಬಿಗಿದಪ್ಪಿ ಸಮಾಧಾನ ಮಾಡಿ, ಮುತ್ತು ನೀಡಿದರು.
ಪಂದ್ಯಾಟದ ಬಳಿಕ ಅಣ್ಣ ತಮ್ಮಂದಿರ ಬಾಂಧವ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪಂದ್ಯಾಟದ ಬಳಿಕ ಮಾತನಾಡಿದ ಕೃನಾಲ್ ಪಾಂಡ್ಯ, "ಇಲ್ಲಿ ಒಬ್ಬರು (ಪಾಂಡ್ಯ) ಮಾತ್ರ ಗೆಲ್ಲುತ್ತಾರೆಂದು ನಮಗೆ ತಿಳಿದಿತ್ತು. ಆದರೆ ನಾವು ಪರಸ್ಪರ ಹೊಂದಿರುವ ಪ್ರೀತಿ ಮತ್ತು ವಾತ್ಸಲ್ಯ ಅದು ಬೇರೆನೇ ಎಂದು ಸ್ಪರ್ಧಾ ಸ್ಪೂರ್ತಿಯನ್ನು ಹೇಳಿದರು.