Select Your Language

Notifications

webdunia
webdunia
webdunia
webdunia

Viral video: ರೈಲಿನ ಇಲೆಕ್ಟ್ರಿಕ್ ಟ್ರ್ಯಾಕ್ ಬಳಿ ಕ್ಲೀನಿಂಗ್ ಮಾಡುತ್ತಿದ್ದ ಸಿಬ್ಬಂದಿ ಕ್ಷಣಾರ್ಧದಲ್ಲಿ ಭಸ್ಮ

Train video

Krishnaveni K

ನವದೆಹಲಿ , ಶನಿವಾರ, 12 ಏಪ್ರಿಲ್ 2025 (09:52 IST)
Photo Credit: X
ನವದೆಹಲಿ: ರೈಲಿನ ಇಲೆಕ್ಟ್ರಿಕ್ ಟ್ರ್ಯಾಕ್ ಬಳಿ ಓಡಾಡದಂತೆ ಸಾಮಾನ್ಯವಾಗಿ ಸಿಬ್ಬಂದಿಗಳು ಸೂಚನೆ ನೀಡುತ್ತಾರೆ. ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಲೆಕ್ಟ್ರಿಕ್ ಟ್ರ್ಯಾಕ್ ಬಳಿ ನಿಂತು ಕ್ಲೀನಿಂಗ್ ಮಾಡುವಾಗಲೇ ಸುಟ್ಟು ಭಸ್ಮವಾದ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದೇಶವೊಂದರ ದೃಶ್ಯ ಇದಾಗಿದೆ. ಸ್ವಚ್ಛತಾ ಸಿಬ್ಬಂದಿ ಆಗಷ್ಟೇ ಬಂದು ನಿಂತ ರೈಲಿನ ಮುಂಭಾಗವನ್ನು ಉದ್ದ ಕೋಲು ಹಿಡಿದು ಸ್ವಚ್ಛತೆ ಮಾಡುತ್ತಿರುತ್ತಾನೆ. ಇದು ಇಲೆಕ್ಟ್ರಿಕ್ ಪವರ್ ಇರುವ ಹಳಿಯಾಗಿರುತ್ತದೆ.

ಸ್ವಚ್ಛತೆ ಮಾಡುತ್ತಾ ತನಗೇ ಅರಿವಿಲ್ಲದಂತೆ ಆತ ಅಚಾನಕ್ ಆಗಿ ಹಳಿಗಳ ಸಂಪರ್ಕಕ್ಕೆ ಬರುತ್ತಾನೆ. ತಕ್ಷಣವೇ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಬಾಂಬ್ ಸ್ಪೋಟಗೊಂಡಂತೆ ಆತ ಶಾಕ್ ತಗುಲಿ ಮಾರುದ್ದ ಹಾರಿ ಬಿದ್ದು ಸುಟ್ಟು ಕರಕಲಾಗುತ್ತಾನೆ.

ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಮ್ಮ ಮೆಟ್ರೋ ಸೇರಿದಂತೆ ಇಲೆಕ್ಟ್ರಿಕ್ ಪವರ್ ಕನೆಕ್ಷನ್ ಇರುವ ರೈಲ್ವೇ ಹಳಿಗಳ ಸನಿಹ ಸುಳಿಯಬೇಡಿ ಎಂದು ಸಿಬ್ಬಂದಿಗಳು ಎಚ್ಚರಿಕೆ ನೀಡುವುದು ಯಾಕೆ ಎಂಬುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

Tehawwur Rana: ಉಗ್ರ ತೆಹವ್ವೂರ್ ರಾಣಾ ಭೇಟಿಗೆ ಹನ್ನೆರಡೇ ಜನರಿಗೆ ಅವಕಾಶ: ಹೇಗಿದೆ ಉಗ್ರನ ಇರಿಸಿರುವ ಕೊಠಡಿ