ಜಮ್ಮು ಕಾಶ್ಮೀರ: ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಉಗ್ರರ ಪೈಕಿ ಇಬ್ಬರು ಉಗ್ರರ ಮನೆಗಳು ಸ್ಪೋಟದಿಂದ ಧ್ವಂಸಗೊಂಡಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರುವಾರ ರಾತ್ರಿ ಸಂಭವಿಸಿದ ಸ್ಪೋಟದಲ್ಲಿ ಉಗ್ರರಾದ ಆಸಿಫ್ ಶೇಖ್ ಮನೆ ಧ್ವಂಸಗೊಂಡಿದೆ. ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್ ನ ಮೊಂಘಮಾ ಪ್ರದೇಶದಲ್ಲಿ ಈತನ ಮನೆಯಿತ್ತು. ಇದೀಗ ಸ್ಪೋಟದಲ್ಲಿ ಧ್ವಂಸಗೊಂಡಿದೆ.
ಪಹಲ್ಗಾಮ್ ಉಗ್ರ ದಾಳಿಯಲ್ಲಿ ಈತನ ಕೈವಾಡವೂ ಇದೆ ಎನ್ನಲಾಗಿದೆ. ಈತ ಲಷ್ಕರ್ ತೊಯ್ಬಾ ಸಂಘಟನೆಯ ಸ್ಥಳೀಯ ಕಮಾಂಡರ್ ಆಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಈತನ ಮನೆಯನ್ನು ಶೋಧಿಸುವಾಗಲೇ ಮನೆಯ ಆವರಣದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿತ್ತು. ಅಪಾಯದ ಸೂಚನೆಯಿದ್ದಿದ್ದರಿಂದ ಪೊಲೀಸ್ ಪಡೆ ಹಿಂದೆ ಬಂದಿತ್ತು.
ಇದೇ ವಸ್ತುಗಳೇ ಈಗ ಸ್ಪೋಟಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಸ್ಪೋಟದ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.