ಜಮ್ಮು ಕಾಶ್ಮೀರ: ಪೆಹಲ್ಗಾಮದಲ್ಲಿ ಉಗ್ರರ ದಾಳಿಯಿಂದ ಹತರಾಗುವ ಕೆಲವೇ ಕ್ಷಣಗಳ ಮೊದಲು ಲೆಫ್ಟಿನೆಂಟ್ ವಿನಯ್ ನರ್ವಾಲ್ ಪತ್ನಿ ಜೊತೆಗಿದ್ದ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ಏಪ್ರಿಲ್ 16 ರಂದು ಮದುವೆಯಾಗಿದ್ದ ವಾಯುಪಡೆ ಅಧಿಕಾರಿ ವಿನಯ್ ಪತ್ನಿ ಜೊತೆ ಕಾಶ್ಮೀರಕ್ಕೆ ಹನಿಮೂನ್ ಗೆ ಬಂದಿದ್ದರು. ಮದುವೆಯಾಗಿ ಇನ್ನೂ ಪತ್ನಿಯ ಕೈಯಲ್ಲಿದ್ದ ಮೆಹಂದಿ ಆರಿರಲಿಲ್ಲ. ಆಗಲೇ ಆಕೆಯ ಕುಂಕುಮವೇ ಅಳಿಸಿ ಹೋಗಿದೆ.
ಪತಿಯ ಮೃತದೇಹದ ಪಕ್ಕದಲ್ಲಿ ಕೂತು ಪತ್ನಿ ಅಳುತ್ತಿರುವ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರ ಕಣ್ಣಂಚು ಒದ್ದೆ ಮಾಡಿದೆ. ಈ ಘಟನೆಗೆ ಕೆಲವೇ ಸಮಯದ ಮೊದಲು ವಿನಯ್ ತಮ್ಮ ಪತ್ನಿ ಜೊತೆ ರೊಮ್ಯಾಂಟಿಕ್ ಹಾಡೊಂದಕ್ಕೆ ರೀಲ್ಸ್ ಮಾಡಿದ್ದರು.
ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪತ್ನಿಯನ್ನು ಎತ್ತಿ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಸುಂದರ ಕ್ಷಣ ಅದಾಗಿತ್ತು. ಆದರೆ ಈ ಸಂತೋಷ ಕೆಲವೇ ಕ್ಷಣ ಮಾತ್ರ ಇತ್ತು. ಈ ವಿಡಿಯೋ ನೋಡಿದರೆ ನಿಮಗೂ ಎದೆ ಭಾರವಾಗಬಹುದು.