ಜಮ್ಮು ಕಾಶ್ಮೀರ: ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯ ವೇಳೆ ಪ್ರಾಣ ಕಳೆದುಕೊಂಡ ತನ್ನ ತಂದೆಗಾಗಿ ಮಗು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಮನಕಲಕುವಂತಿದೆ.
ಉಗ್ರರ ದಾಳಿಯಲ್ಲಿ ತನ್ನ ತಂದೆ, ತಾಯಿಯನ್ನು ಕಳೆದುಕೊಂಡ ಮಗು ಏಕಾಂಗಿಯಾಗಿದೆ. ಈ ಮಗುವನ್ನು ಸೇನಾಧಿಕಾರಿಗಳು ರಕ್ಷಣೆ ಮಾಡಿ ಕರೆದೊಯ್ಯುವಾಗ ಸಮಾಧಾನ ಮಾಡುತ್ತಿದ್ದಾರೆ. ಆದರೆ ಮಗು ಏನೇ ಮಾಡಿದರೂ ಸಮಾಧಾನವಾಗುತ್ತಿಲ್ಲ.
ನನಗೆ ಚಾಕಲೇಟ್, ಬಿಸ್ಕತ್ ಏನೂ ಬೇಡ, ನನ್ನ ಅಪ್ಪ-ಅಮ್ಮ ಬೇಕು ಎಂದು ಮಗು ಅಳುತ್ತಿದೆ. ಇದೇ ಮಗು ತನ್ನ ತಂದೆಯ ಶವದ ಬಳಿ ಕೂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಇದಕ್ಕೆ ಮೊದಲು ವೈರಲ್ ಆಗಿತ್ತು.
ಈ ದೃಶ್ಯವನ್ನು ನೋಡಿ ಎಷ್ಟೋ ಜನರ ಹೃದಯ ಭಾರವಾಗುವುದು ಖಂಡಿತಾ. ಪ್ರವಾಸಕ್ಕೆಂದು ಬಂದ ಮಗು ತನ್ನ ತಂದೆ-ತಾಯಿ ಜೊತೆ ಖುಷಿಯಿಂದ ಕಾಲ ಕಳೆಯಬೇಕಿತ್ತು. ಆದರೆ ಈಗ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದೆ.