ಜಮ್ಮು ಕಾಶ್ಮೀರ: ಪೆಹಲ್ಗಾಮ್ ನಲ್ಲಿ ನಿನ್ನೆ ಪ್ರವಾಸೀ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ಮಾಡಿದ ಬೆನ್ನಲ್ಲೇ ಇಂದು ಭಾರತೀಯ ಸೇನೆ ಇಬ್ಬರು ನರಹಂತಕರನ್ನು ಕೊಂದು ಹಾಕಿದೆ.
ಬಾರಾಮುಲ್ಲಾದಲ್ಲಿ ಇಂದು ನಡೆದ ದಾಳಿ ನಡೆಸಿ ಇಬ್ಬರು ಉಗ್ರರನ್ನು ಯೋಧರು ಕೊಂದು ಹಾಕಿದ್ದಾರೆ. ನಿನ್ನೆ ಪೆಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಯೋಧರು ಉಗ್ರರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
ಎರಡು-ಮೂರು ಉಗ್ರರು ಒಳನುಸುಳುವ ಪ್ರಯತ್ನ ನಡೆಸಿದ್ದಾಗ ಯೋಧರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಉಗ್ರರನ್ನು ಹೊಡೆದು ಹಾಕಲಾಗಿದೆ ಎಂದು ಭಾರತೀಯ ಸೇನೆ ಪ್ರಕಟಣೆ ತಿಳಿಸಿದೆ. ಇವರಿಂದ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿಯಿಂದಾಗಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ. ಉಗ್ರರಿಗಾಗಿ ಗಲ್ಲಿ ಗಲ್ಲಿ ಹುಡುಕಾಟ ನಡೆಸುತ್ತಿದೆ.