ಪೆಹಲ್ಗಾಮ್: ಇಲ್ಲಿ ನಡೆದ ಭೀಕರ ಉಗ್ರ ದಾಳಿಯ ಕರಾಳತೆ ಒಂದೊಂದೇ ಬಯಲಾಗುತ್ತಿದೆ. ತನ್ನ ತಂದೆಗೆ ಉಗ್ರರು ಮುಸ್ಲಿಂ ಧಾರ್ಮಿಕ ಪಠಣ ಕಲಿಮಾ ಹೇಳು ಎಂದ. ಗೊತ್ತಿಲ್ಲ ಎಂದಿದ್ದಕ್ಕೆ ಕೊಂದೇ ಬಿಟ್ಟ ಎಂದು ಮಗಳು ಕಣ್ಣೀರು ಹಾಕುತ್ತಿದ್ದಾಳೆ.
ನಿನ್ನೆ ಉಗ್ರ ದಾಳಿಯಲ್ಲಿ ಮೃತರಾದವರಲ್ಲಿ ಪುಣೆಯ ಜಗನ್ನಾಥ ಜಗದಾಳೆ ಕೂಡಾ ಒಬ್ಬರು. 54 ವರ್ಷದ ಜಗನ್ನಾಥ್ ತಮ್ಮ ಪತ್ನಿ, ಮಗಳೊಂದಿಗೆ ಕಾಶ್ಮೀರ ಪ್ರವಾಸಕ್ಕೆ ಹೋಗಿದ್ದರು. ಉಗ್ರ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಟೆಂಟ್ ಒಂದರಲ್ಲಿ ಅಡಗಿಕೊಂಡರು. ಘಟನೆ ಬಗ್ಗೆ ಜಗನ್ನಾಥ್ ಮಗಳು ಕಣ್ಣೀರು ಹಾಕುತ್ತಲೇ ವಿವರಿಸಿದ್ದಾಳೆ.
ಆದರೆ ಅಲ್ಲಿಗೆ ಬಂದ ಉಗ್ರರು ಹೊರಗೆ ಬರುವಂತೆ ಆವಾಜ್ ಹಾಕಿದರು. ಆಗ ನಮ್ಮ ತಂದೆ ಹೊರಗೆ ಬಂದರು. ಅವರ ಬಳಿ ಇಸ್ಲಾಮಿಕ್ ಕಲಿಮಾ ಹೇಳುವಂತೆ ಹೇಳಿದರು. ಆದರೆ ಅವರು ಗೊತ್ತಿಲ್ಲ ಎಂದರು. ಆಗ ಉಗ್ರರು ಕಿವಿ, ತಲೆ, ಬೆನ್ನಿಗೆ ಗುಂಡು ಹೊಡೆದು ನಮ್ಮ ಕಣ್ಣೆದುರೇ ಕೊಂದರು ಎಂದು ಮಗಳು ಕಣ್ಣೀರು ಹಾಕಿದ್ದಾಳೆ.