ಬೆಂಗಳೂರು: ಇಷ್ಟು ದಿನ ಮಧ್ಯಮ ವರ್ಗದವರು ಚಿನ್ನದ ಬೆಲೆ ಇಷ್ಟಾದರೆ ಗತಿಯೇನೋ ಎಂದು ಭಯಗೊಂಡಿದ್ದರು. ಅದೀಗ ನಿಜವಾಗಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ ಲಕ್ಷದ ಗಡಿ ದಾಟಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 99,860 ರೂ.ಗೆ ಬಂದು ತಲುಪಿತ್ತು. ಮೊನ್ನೆಯಿಂದ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಇದುವರೆಗೆ ಕಾಣದಷ್ಟು ಏರಿಕೆಯಾಗಿದೆ. ಇಂದು ಚಿನ್ನದ ದರ ಲಕ್ಷದ ಗಡಿ ದಾಟಿದ್ದು ಪರಿಶುದ್ಧ ಚಿನ್ನದ ಬೆಲೆ ಬರೋಬ್ಬರಿ 1,01,890 ರೂ.ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಣ್ಣಮಟ್ಟಿಗೆ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 1 ರೂ.ಗಳಷ್ಟು ಏರಿಕೆಯಾಗಿದ್ದು 9,291 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 1 ರೂ. ಹೆಚ್ಚಾಗಿದ್ದು 10,136 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 1 ರೂ. ಏರಿಕೆಯಾಗಿದ್ದು 7,602 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು. ಇಂದು ಮತ್ತೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 100 ರೂ.ಗಳಷ್ಟು ಏರಿಕೆಯಾಗಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಂದು 1,01,200 ರೂ.ಗಳಾಗಿವೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.