ಪೆಹಲ್ಗಾಮ್: ಭಾರತೀಯ ಸೇನೆಯ ಸಮವಸ್ತ್ರದಲ್ಲೇ ಉಗ್ರರು ಬಂದು ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹೀಗಾಗಿ ಸಂತ್ರಸ್ತರು ಭಾರತೀಯ ಯೋಧರನ್ನು ಕಂಡರೂ ಭಯಗೊಂಡು ಅಳುತ್ತಿರುವ ಕರುಳು ಹಿಂಡುವ ದೃಶ್ಯ ವೈರಲ್ ಆಗಿದೆ.
ಪ್ರವಾಸಿಗರು ಅದರಲ್ಲೂ ಹಿಂದೂ ಪುರುಷರನ್ನೇ ಗುರಿಯಾಗಿರಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಿಮ್ಮ ಧರ್ಮ ಯಾವುದು ಎಂದು ಕೇಳಿ ಹಿಂದೂ ಎಂದು ಖಚಿತಪಡಿಸಿಕೊಂಡು ಉಗ್ರರು ಪುರುಷರನ್ನು ಗುಂಡಿಟ್ಟು ಕೊಲೆ ಮಾಡಿದ್ದರು.
ಈ ದಾಳಿ ಬಳಿಕ ಭಾರತೀಯ ಸೇನಾ ಯೋಧರು ಸ್ಥಳಕ್ಕೆ ಧಾವಿಸಿ ಪ್ರವಾಸಿಗರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಂಡಿತ್ತು. ಸ್ಥಳದಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಮಾತನಾಡಿಸುವಾಗ ಅವರು ಮತ್ತೆ ಉಗ್ರರೇ ಮಾರುವೇಷದಲ್ಲಿ ಬಂದಿರಬಹುದೇನೋ ಎಂದು ಭಯದಿಂದ ಅಳುತ್ತಿದ್ದರು.
ಮಕ್ಕಳು, ಮಹಿಳೆಯರು ನಮ್ಮನ್ನು ಕೊಲ್ಲಬೇಡಿ ಎಂದು ಜೋರಾಗಿ ಅಳುತ್ತಿದ್ದರು. ಇವರನ್ನು ನೋಡಿ ನಾವು ನಿಮಗೇನೂ ಮಾಡಲ್ಲ, ನಾವು ಭಾರತೀಯ ಯೋಧರು ನಿಮಗೆ ಸಹಾಯ ಮಾಡಲು ಬಂದಿದ್ದೇವೆ ಎಂದು ಕೊನೆಗೆ ಅವರನ್ನು ಸಮಾಧಾನಪಡಿಸಿದರು.