ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿ ಇಂದು ಉಗ್ರರು ನಡೆಸಿದ ದಾಳಿಗೆ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಸ್ಥಳಕ್ಕೆ ಗೃಹಸಚಿವ ಅಮಿತ್ ಶಾ ಎಂಟ್ರಿ ಕೊಟ್ಟಿದ್ದು, ವಿದೇಶದಲ್ಲಿರುವ ಪಿಎಂ ಮೋದಿ ಉಗ್ರರನ್ನು ಸುಮ್ನೇ ಬಿಡಲ್ಲ ಎಂದಿದ್ದಾರೆ.
ಸದ್ಯಕ್ಕೆ ಗಲ್ಫ್ ರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿಂದಲೇ ಕ್ಷಣ ಕ್ಷಣದ ಅಪ್ ಡೇಟ್ ಪಡೆಯುತ್ತಿದ್ದಾರೆ. ಸ್ವತಃ ಗೃಹ ಸಚಿವ ಅಮಿತ್ ಶಾ ದಾಳಿ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.
ಇಂದಿನ ದಾಳಿಯಲ್ಲಿ ಕರ್ನಾಟಕದ ಮಂಜುನಾಥ್ ಎಂಬವರೂ ಮೃತಪಟ್ಟಿದ್ದಾರೆ. ಪತ್ನಿ ಪಲ್ಲವಿ ಮತ್ತು ಪುತ್ರನ ಕಣ್ಣೆದುರೇ ಇವರ ಧರ್ಮ ಯಾವುದು ಎಂದು ಕೇಳಿದ ಉಗ್ರರು ಕೊಲೆ ಮಾಡಿದ್ದಾರೆ. ಗಂಡನ ಸಾವನ್ನು ಕಣ್ಣಾರೆ ಕಂಡ ಪತ್ನಿ ಪಲ್ಲವಿ ನನ್ನ ಮತ್ತು ನನ್ನ ಮಗನನ್ನೂ ಕೊಲ್ಲು ಎಂದು ಉಗ್ರರ ಬಳಿ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಉಗ್ರ ನೀನು ಮಹಿಳೆ ನಿನ್ನನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳು ಎಂದಿದ್ದಾನಂತೆ.
ಇದೀಗ ಘಟನೆ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಆಕ್ರೋಶ ಕೇಳಿಬರುತ್ತಿದೆ. ಉಗ್ರರ ದಾಳಿಗೆ ಕೇಂದ್ರ ಸರ್ಕಾರ ಯಾವ ರೀತಿ ಪ್ರತ್ಯುತ್ತರ ನೀಡುತ್ತದೆ ಕಾದುನೋಡಬೇಕಿದೆ.