Select Your Language

Notifications

webdunia
webdunia
webdunia
webdunia

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

Modi Muslims

Krishnaveni K

ನವದೆಹಲಿ , ಗುರುವಾರ, 17 ಏಪ್ರಿಲ್ 2025 (20:18 IST)
Photo Credit: X
ನವದೆಹಲಿ: ಒಂದೆಡೆ ಸುಪ್ರೀಂಕೋರ್ಟ್ ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಅರ್ಜಿ ಸಲ್ಲಿಕೆಯಾಗುತ್ತಿದ್ದರೆ ಇತ್ತ ಮುಸ್ಲಿಮರ ನಿಯೋಗವೊಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಕಾಯಿದೆ ತಂದಿದ್ದಕ್ಕೆ ಧನ್ಯವಾದ ಸಲ್ಲಿಸಿದೆ.

ಇಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಕಾಯಿದೆಯ ಎರಡು ಅಂಶಗಳಿಗೆ ತಡೆ ನೀಡಿ ಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 5 ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿಯನ್ನು ಮುಸ್ಲಿಮ್ ನಿಯೋಗವೊಂದು ಭೇಟಿ ಮಾಡಿ ಧನ್ಯವಾದ ಸಲ್ಲಿಸಿರುವುದು  ವಿಶೇಷ.

ದಾವೂದಿ ಬೊಹ್ರಾ ಸಮುದಾಯದ ನಿಯೋಗ ಇಂದು ಪ್ರಧಾನಿ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ಇದು ಬೊಹ್ರಾ ಸಮುದಾಯದ ದೀರ್ಘಕಾಲದ ಬೇಡಿಕೆಯಾಗಿತ್ತು  ಎಂದಿದ್ದಾರೆ. ನಾವು ಪ್ರಧಾನ ಮಂತ್ರ ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ದೃಷ್ಟಿಕೋನದಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದಿದ್ದಾರೆ.

ಇದರೊಂದಿಗೆ ಎಲ್ಲಾ ಮುಸ್ಲಿಮ್ ಸಮುದಾಯದವರೂ ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ