Select Your Language

Notifications

webdunia
webdunia
webdunia
webdunia

PM Modi: ಹಿಂದಿ ಹೇರಿಕೆ ಅಂತೀರಿ, ಸೈನ್ ಕೂಡಾ ತಮಿಳಿನಲ್ಲಿ ಮಾಡಲ್ವಲ್ರೋ: ಮೋದಿ ಲೇವಡಿ

Modi

Krishnaveni K

ಚೆನ್ನೈ , ಸೋಮವಾರ, 7 ಏಪ್ರಿಲ್ 2025 (10:57 IST)
ಚೆನ್ನೈ: ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಪ್ರತಿಭಟನೆ ಮಾಡುತ್ತೀರಿ. ಆದರೆ ನೀವು ಸಹಿ ಕೂಡಾ ತಮಿಳಿನಲ್ಲಿ ಹಾಕಲ್ವಲ್ರೋ ಎಂದು ತಮಿಳುನಾಡು ರಾಜಕಾರಣಿಗಳಿಗೆ ಪ್ರಧಾನಿ ಮೋದಿ ಟಾಂಗ್ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರ ಎನ್ಇಪಿ ಶಿಕ್ಷಣ ಜಾರಿಗೆ ತರುವ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸೇರಿದಂತೆ ಡಿಎಂಕೆ ನಾಯಕರು ಸಮರವನ್ನೇ ಸಾರಿದ್ದಾರೆ. ಕೇಂದ್ರದ ವಿರುದ್ಧ ಕತ್ತಿಮಸೆಯುತ್ತಲೇ ಇರುತ್ತಾರೆ.

ಇದೀಗ ತಮಿಳಿನಾಡಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಡಿಎಂಕೆ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಮಾತೆತ್ತಿದರೆ ಹಿಂದಿ ಹೇರಿಕೆ ಎನ್ನುತ್ತೀರಿ. ತಮಿಳು ನಾಯಕರು ಯಾರೂ ತಮಿಳಿನಲ್ಲಿ ಸಹಿ ಮಾಡುವುದನ್ನು ನಾನು ನೋಡಿಲ್ಲ. ಕನಿಷ್ಠ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ ಎಂದು ಮೋದಿ ವ್ಯಂಗ್ಯ ಮಾಡಿದ್ದಾರೆ.

‘ತಮಿಳುನಾಡಿನಿಂದ ಹಲವು ಪತ್ರಗಳು ಬಂದಿವೆ. ಆದರೆ ಇದುವರೆಗೆ ಯಾವ ಪತ್ರದಲ್ಲೂ ತಮಿಳಿನಲ್ಲಿ ಸಹಿ ಇರಲಿಲ್ಲ. ನಿಮಗೆ ನಿಜವಾಗಿಯೂ ಮಾತೃಭಾಷೆ ಬಗ್ಗೆ ಅಭಿಮಾನವಿದ್ದರೆ ಕನಿಷ್ಠ ಪಕ್ಷ ಸಹಿಯಾದರೂ ತಮಿಳಿನಲ್ಲಿ ಹಾಕಿ ಎಂದಿದ್ದಾರೆ.

ಕೆಲವೊಮ್ಮೆ ತಮಿಳುನಾಡಿನ ನಾಯಕರ ಪತ್ರ ಬಂದಾಗ ನನಗೆ ಅಚ್ಚರಿಯಾಗುತ್ತದೆ. ಅದರಲ್ಲಿ ತಮಿಳಿನಲ್ಲಿ ಸಹಿ ಕೂಡಾ ಇರುವುದಿಲ್ಲ. ತಮಿಳುನಾಡಿನ ಬಡ ವಿದ್ಯಾರ್ಥಿಗಳಿಗಾಗಿ ವೈದ್ಯಕೀಯ ಕೋರ್ಸ್ ಗಳನ್ನು ತಮಿಳಿನಲ್ಲೇ ಪರಿಚಯಿಸಿ. ಕಳೆದ 10ವರ್ಷಗಳಲ್ಲಿ ತಮಿಳುನಾಡಿಗೆ 11 ವೈದ್ಯಕೀಯ ಕಾಲೇಜುಗಳು ಸಿಕ್ಕಿವೆ. ಬಡ ಮಕ್ಕಳೂ ವೈದ್ಯರಾಗುವ ಕನಸು ನನಸು ಮಾಡಲು ತಮಿಳು ಭಾಷೆಯಲ್ಲಿ ವೈದ್ಯಕೀಯ ಕೋರ್ಸ್ ಗಳನ್ನು ಆರಂಭಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

Karnataka ಬಿಜೆಪಿ ಜನಾಕ್ರೋಶ ಯಾತ್ರೆಗೇ ಆಕ್ರೋಶ