ನವದೆಹಲಿ: ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾಕದ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿದ್ದು ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ದೇಶ ಮುಖ್ಯ ಎಂದು ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ತವರಿಗೆ ಬಂದಿಳಿದಿದ್ದಾರೆ.
ಇದೀಗ ಮೋದಿ ದೆಹಲಿಗೆ ಬಂದಿಳಿದಿದ್ದಾರೆ. ಇಂದು ಬೆಳಿಗ್ಗೆ 11.30 ಕ್ಕೆ ಪ್ರಧಾನಿ ಮೋದಿ ಮಹತ್ವದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯಲು ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.
ನಿನ್ನೆ ಘಟನೆ ನಡೆದ ಬಳಿಕ ಪ್ರಧಾನಿ ಮೋದಿ ತಕ್ಷಣವೇ ಗೃಹಸಚಿವ ಅಮಿತ್ ಶಾರನ್ನು ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಅಮಿತ್ ಶಾ ಸ್ಥಳಕ್ಕೆ ಬಂದು ಸೇನಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವಿವರಗಳನ್ನು ಪ್ರಧಾನಿ ಮೋದಿಗೆ ಕಳುಹಿಸಲಾಗಿದೆ.
ಉಗ್ರ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಮೋದಿ, ತಕ್ಷಣವೇ ಟ್ವೀಟ್ ಮಾಡಿದ್ದ ಅವರು, ಉಗ್ರರನ್ನು ಸುಮ್ಮನೇ ಬಿಡಲ್ಲ ಎಂದಿದ್ದರು. ಅದರಂತೆ ಈಗ ಕಾರ್ಯಪ್ರವೃತ್ತರಾಗಿದ್ದಾರೆ.