ನವದೆಹಲಿ: ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸೀ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿದ ಭಯೋತ್ಪಾದಕ ಸಂಘಟನೆ ಟಿಆರ್ ಎಫ್. ಇದು ಲಷ್ಕರ್ ತೊಯ್ಬಾ ಸಂಘಟನೆಯ ಅಂಗ ಸಂಸ್ಥೆಯಾಗಿದೆ. ಪೆಹಲ್ಗಾಮ್ ದಾಳಿಯ ರೂವಾರಿ ಸೈಫುಲ್ಲಾ ಕಸೂರಿ. ಈ ಉಗ್ರನಿಗೆ ಭಾರತದ ಪ್ರಧಾನಿಗಿಂತಲೂ ಹೆಚ್ಚಿನ ಭದ್ರತೆಯಿದೆ, ಪಾಕಿಸ್ತಾನದಲ್ಲಿ ಈತನಿಗೆ ಫುಲ್ ವಿಐಪಿ ಟ್ರೀಟ್ ಮೆಂಟ್ ಸಿಗುತ್ತದೆ.
ಪೆಹಲ್ಗಾಮ್ ನಲ್ಲಿ ನಿನ್ನೆ ಸುಮಾರು 7 ಜನ ಉಗ್ರರ ಗುಂಪು ಭಾರತೀಯ ಸೇನೆಯವರಂತೇ ಸಮವಸ್ತ್ರ ಧರಿಸಿ ಪ್ರವಾಸಿಗರಿರುವ ಸ್ಥಳಕ್ಕೆ ಬಂದು ಧರ್ಮ ಯಾವುದು ಎಂದು ಕೇಳಿ ಗುಂಡು ಹೊಡೆದು ಸುಮಾರು 26 ಮಂದಿಯನ್ನು ಸಾಯಿಸಿದ್ದಾರೆ. ಈ ದಾಳಿಯ ಬಗ್ಗೆ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಇನ್ನು, ಈ ದಾಳಿಯ ಹೊಣೆಯನ್ನು ಟಿಆರ್ ಎಫ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದರ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ. ಈತ ಲಷ್ಕರ್ ಸಂಘಟನೆಯ ಪ್ರಮುಖ ವ್ಯಕ್ತಿಯೂ ಹೌದು. ಪಾಕಿಸ್ತಾನದಲ್ಲಿ ಈತ ಎಲ್ಲೇ ಹೋದರೂ ವಿಐಪಿ ಟ್ರೀಟ್ ಮೆಂಟ್. ಸ್ವತಃ ಪಾಕಿಸ್ತಾನ ಸೇನೆಯೇ ಈತನಿಗೆ ರತ್ನಗಂಬಳಿ ಹಾಸಿ ನೋಡಿಕೊಳ್ಳುತ್ತದೆ. ಇತ್ತೀಚೆಗೆ ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಇನ್ನು ಮುಂದೆ ನಮ್ಮ ಸಂಘಟನೆ ದಾಳಿ ತೀವ್ರ ಗೊಳಿಸುತ್ತದೆ. ಮುಂದಿನ ವರ್ಷ ಫೆಬ್ರವರಿ ವೇಳೆಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ಬಡಬಡಿಸಿಕೊಂಡಿದ್ದ. ಈತ ಭಾರತದ ಪ್ರಮುಖ ಶತ್ರು, ಉಗ್ರ ಹಫೀಜ್ ಸಯೀದ್ ನ ನಿಕಟವರ್ತಿ ಎನ್ನಲಾಗಿದೆ.