ನವದೆಹಲಿ: ಮುಸ್ಲಿಮರಿಗೆ ದೇಶದೊಳಗೆ ತೊಂದರೆಯಾಗ್ತಿದೆ ಅದಕ್ಕೇ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಮೋದಿಗೆ ಸಂದೇಶ ಮುಟ್ಟಿಸಲು ಉಗ್ರರು ದಾಳಿ ಮಾಡಿದ್ದಾರೆ ಎಂದು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಅವರ ಹೇಳಿಕೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ತಮ್ಮ ಹೇಳಿಕೆ ಮೂಲಕ ಅವರು ಉಗ್ರರ ಕೃತ್ಯವನ್ನೇ ಸಮರ್ಥಿಸಿದಂತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ರಾಬರ್ಟ್ ವಾದ್ರಾ ಉಗ್ರರ ದಾಳಿಗೆ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಸರ್ಕಾರ ಸದಾ ಹಿಂದುತ್ವದ ಬಗ್ಗೆ ಮಾತನಾಡುತ್ತಿರುತ್ತದೆ. ಅದಕ್ಕೇ ಅಲ್ಪಸಂಖ್ಯಾತರಿಗೆ ಅಸುರಕ್ಷಿತ ಭಾವನೆ ಬರುತ್ತಿದೆ.
ಈ ಉಗ್ರ ದಾಳಿಯನ್ನೇ ನೀವು ನೋಡುವುದಾದರೆ ಅವರು ಜನರ ಧರ್ಮ ಯಾವುದು ಎಂದು ಗುರುತು ಮಾಡಿ ದಾಳಿ ಮಾಡಿದರು. ಅವರು ಯಾಕೆ ಹೀಗೆ ಮಾಡಿದರು? ಯಾಕೆಂದರೆ ನಮ್ಮ ದೇಶದಲ್ಲಿ ಈಗ ಹಿಂದು ಮತ್ತು ಮುಸ್ಲಿಂ ಎಂದು ಪ್ರತ್ಯೇಕತೆಯ ವಾತಾವರಣ ಬಂದಿದೆ. ಇದರಿಂದಾಗಿಯೇ ಇಂತಹ ಸಂಸ್ಥೆಗಳಿಗೆ ಹಿಂದೂಗಳಿಂದ ಮುಸ್ಲಿಂ ಧರ್ಮಕ್ಕೆ ತೊಂದರೆಯಾಗುತ್ತಿದೆ ಎಂಬ ಭಾವನೆ ಮೂಡಲು ಕಾರಣವಾಗುತ್ತಿದೆ.
ಜನರ ಗುರುತು ಪತ್ತೆ ಹಚ್ಚಿ ಪತ್ತೆ ಮಾಡಿರುವುದು ಮೋದಿಗೆ ಸಂದೇಶ ಮುಟ್ಟಿಸಲು. ಯಾಕೆಂದರೆ ಮುಸ್ಲಿಮರಿಗೆ ದುರ್ಬಲರು ಎಂಬ ಭಾವನೆ ಮೂಡುತ್ತಿದೆ. ನಮ್ಮ ದೇಶ ಜಾತ್ಯಾತೀತ ಎಂಬ ಭಾವನೆ ಬಂದರೆ ಇಂತಹ ಘಟನೆಗಳು ಬಾರದು ಎಂದು ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ.