Publish Date: Thu, 09 Jul 2026 (09:50 IST)
Updated Date: Thu, 09 Jul 2026 (09:54 IST)
ಹೈದರಾಬಾದ್: ಚೈನ್ ಕದ್ದು ಓಡುತ್ತಿದ್ದ ಖದೀಮನನ್ನು ಅಟೋ ಡ್ರೈವರ್ ಒಂದು ಡಿಚ್ಚಿ ಕೊಟ್ಟು ಸೆರೆ ಹಿಡಿದ ಸಿನಿಮೀಯ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಮೊಹಮ್ಮದ್ ಜಹೀರ್ ಎಂಬ ಅಟೋ ಚಾಲಕ ಮಹಿಳೆಯ ಕುತ್ತಿಗೆಯಿಂದ ಸರ ಕದ್ದು ಓಡುತ್ತಿದ್ದ ಕಳ್ಳನನ್ನು ಸೆರೆ ಹಿಡಿಯಲು ಸಹಾಯ ಮಾಡಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಬ್ಬರು ಮಹಿಳೆಯರು ರಾತ್ರಿ ಹೊತ್ತು ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಬೈಕ್ ನಲ್ಲಿ ಬರುವ ಕಳ್ಳ ಮಹಿಳೆಯ ಕುತ್ತಿಗೆಯಿಂದ ಚೈನ್ ಕದ್ದು ಬೈಕ್ ಏರಿ ಓಡಲು ಯತ್ನಿಸುತ್ತಾನೆ. ಇದನ್ನು ಅದೇ ದಾರಿಯಲ್ಲಿ ಪಾಸ್ ಆಗುತ್ತಿದ್ದ ಆಟೋ ಚಾಲಕ ಜಹೀರ್ ಗಮನಿಸುತ್ತಾರೆ.
ಮುಂದೆ ಹೋದವರು ರಿವರ್ಸ್ ಬರುವ ಅವರು ತಮ್ಮ ಅಟೋ ಮೂಲಕ ಬೈಕ್ ಗೆ ಗುದ್ದಿ ಕಳ್ಳನನ್ನು ಕೆಳಕ್ಕೆ ಬೀಳಿಸುತ್ತಾರೆ. ಅಷ್ಟರಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡಿದ್ದರಿಂದ ಕೆಲವು ಜನರು ಅಲ್ಲಿಗೆ ಬರುತ್ತಾರೆ. ಎಲ್ಲರೂ ಸೇರಿಕೊಂಡು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಅಟೋ ಚಾಲಕನ ಸಾಹಸಕ್ಕೆ ಪೊಲೀಸರು ಸನ್ಮಾನಿಸುತ್ತಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ