Select Your Language

Notifications

webdunia
webdunia
webdunia
webdunia

ಪ್ರವಾಹದಲ್ಲಿ ತೇಲಿಬಂತು ಎಲ್ ಪಿಜಿ ಸಿಲಿಂಡರ್: ಸಿಕ್ಕಿದ್ದೇ ಲಾಭ ಎಂದು ಹೊತ್ತೊಯ್ದ ಜನ Video

LPG Cylinder in Maharastra flood
Photo Credit: X
ಮುಂಬೈ: ಕೆಲವೇ ದಿನಗಳ ಹಿಂದೆ ಎಲ್ ಪಿಜಿ ಸಿಲಿಂಡರ್ ಗಾಗಿ ಜನ ಕ್ಯೂನಲ್ಲಿ ನಿಂತು ಬೇಸತ್ತಿದ್ದರು. ಆದರೆ ಈಗ ಎಲ್ ಪಿಜಿ ಸಿಲಿಂಡರ್ ಯಾವುದೋ ಕಸ, ಕಡ್ಡಿಯಂತೆ ನೀರಿನಲ್ಲಿ ತೇಲಿಬರುತ್ತಿದೆ. ಜನರೂ ಸಿಕ್ಕಿದ್ದೆಲ್ಲಾ ಲಾಭ ಎಂದು ಹೊತ್ತೊಯ್ದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
 

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ನದಿ ಮತ್ತು ತೊರೆಗಳು ಮಿತಿಮೀರಿ ಹರಿಯುತ್ತಿವೆ. ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದ್ದರಿಂದ ಗ್ಯಾಸ್ ಸಿಲಿಂಡರ್ ಗೋದಾಮಿನ ಆವರಣ ಸಂಪೂರ್ಣವಾಗಿ ಜಲಾವೃತಗೊಂಡಿತು. ನೀರಿನ ಪ್ರವಾಹ ಎಷ್ಟು ತೀವ್ರವಾಗಿತ್ತೆಂದರೆ, ಅಲ್ಲಿದ್ದ ಸಾವಿರಾರು ಸಿಲಿಂಡರ್‌ಗಳು ಆಟಿಕೆಗಳಂತೆ ನೀರಿನ ಮೇಲೆ ತೇಲುತ್ತಾ ಕೊಚ್ಚಿಹೋದವು.

ಪ್ರವಾಹದಲ್ಲಿ ಎಲ್ ಪಿಜಿ ಸಿಲಿಂಡರ್ ಗಳ ರಾಶಿಯೇ ಹರಿದುಬರುತ್ತಿದ್ದರೆ ಕೆಲವರು ನೋಡುತ್ತಾ ನಿಂತಿದ್ದರು. ಮತ್ತೆ ಕೆಲವರು ಗಾಳ ಹಾಕಿ ಸಿಲಿಂಡರ್ ಹಿಡಿದು ಸಂಗ್ರಹಿಸುತ್ತಿದ್ದರು.

ಪ್ರವಾಹದ ನೀರಿನಲ್ಲಿ ನೂರಾರು ಸಿಲಿಂಡರ್‌ಗಳು ಸಾಲಾಗಿ ತೇಲಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭಾರೀ ಕೌತೂಕ ಹಾಗೂ ಆತಂಕವನ್ನು ಸೃಷ್ಟಿಸಿದೆ.

pic.twitter.com/DNVMgROabf

 

— Amrendra Bahubali ???????? (@TheBahubali_IND) July 8, 2026

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮೋಕಿಂಗ್ ಮಾಡಲು ನನ್ನ ಪರ್ಮಿಷನ್ ತಗೊಂಡ್ರಾ: ಕ್ಯಾಬ್ ಚಾಲಕನ ಧೈರ್ಯಕ್ಕೆ ನೆಟ್ಟಿಗರ ಸಲಾಂ Video