Select Your Language

Notifications

webdunia
webdunia
webdunia
webdunia

ರೈಲಿನ ಎಸಿ ಕೋಚ್ ನಲ್ಲಿ ಫಸ್ಟ್ ನೈಟ್: ವಿಡಿಯೋ ಪ್ರಕಟಿಸಿ ರೈಲ್ವೇ ಸಚಿವರಿಗೆ ಪ್ರಶ್ನಿಸಿದ ನೆಟ್ಟಿಗರು video

Train first night
Photo Credit: X
ನವದೆಹಲಿ: ರೈಲಿನ ಎಸಿ ಕೋಚ್ ನಲ್ಲಿ ಫಸ್ಟ್ ನೈಟ್ ಗೆ ಅರೇಂಜ್ ಮಾಡಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ನೆಟ್ಟಿಗರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗೆ ಪ್ರಶ್ನೆ ಮಾಡಿದ್ದಾರೆ.

ರೈಲಿನಲ್ಲಿ ದೂರ ಪ್ರಯಾಣ ಮಾಡುವಾಗ ನಮ್ಮ ಸೀಟ್, ಕಂಪಾರ್ಟ್ ಮೆಂಟ್ ಮನೆಯ ಥರಾ ಆಗಿಬಿಡುತ್ತದೆ. ಅದರಲ್ಲೂ ಇತ್ತೀಚೆಗೆ ಭಾರತೀಯ ರೈಲಿನ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು ಶುಚಿತ್ವ, ಸೀಟ್ ಅರೇಂಜ್ ಮೆಂಟ್ ವಿಚಾರದಲ್ಲಿ ಮೇಲ್ದರ್ಜೆಗೇರಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಎಸಿ ಕೋಚ್ ಕಂಪಾರ್ಟ್ ಮೆಂಟ್ ಒಂದರಲ್ಲಿ ನವಜೋಡಿಯ ಫಸ್ಟ್ ನೈಟ್ ಗೆ ಅರೇಂಜ್ ಮಾಡಲಾಗಿದೆ. ಸೀಟ್ ಗಳನ್ನೇ ಮಂಚವಾಗಿ ಮಾಡಿ ಅದರ ಮೇಲೆ ಹೂ ಹಾಕಿ ಇಡೀ ಕಂಪಾರ್ಟ್ ಮೆಂಟ್ ನ ಗೋಡೆಗೆಲ್ಲಾ ಹೂಗಳನ್ನು ಅಂಟಿಸಿ ಪಕ್ಕಾ ಫಸ್ಟ್ ನೈಟ್ ಗೆ ಅರೇಂಜ್ ಮೆಂಟ್ ಮಾಡಲಾಗಿದೆ.

ಈ ವಿಡಿಯೋ ನೋಡಿ ನೆಟ್ಟಿಗರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗೆ ಇಂತಹದ್ದಕ್ಕೆಲ್ಲಾ ರೈಲಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹ ಅವಾಂತರಗಳಿಗೆ ಅನುಮತಿ ನೀಡುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

pic.twitter.com/nDUQMkxEyt

 

— Dr Nimo Yadav 2.0 (@DrNimoYadav) July 8, 2026

Share this Story:

Follow Webdunia kannada

ಮುಂದಿನ ಸುದ್ದಿ

ಸಿಯಾ ಗೋಯಲ್ ಇಫೆಕ್ಟ್, ಮದುವೆ ಮಂಟಪದಿಂದಲೇ ಎಸ್ಕೇಪ್ ಆದ ವರ: ಬೆನ್ನಟ್ಟಿ ಬಂದ ವಧು ಮಾಡಿದ್ದೇನು Video