Select Your Language

Notifications

webdunia
webdunia
webdunia
webdunia

ಸ್ಮೋಕಿಂಗ್ ಮಾಡಲು ನನ್ನ ಪರ್ಮಿಷನ್ ತಗೊಂಡ್ರಾ: ಕ್ಯಾಬ್ ಚಾಲಕನ ಧೈರ್ಯಕ್ಕೆ ನೆಟ್ಟಿಗರ ಸಲಾಂ Video

viral video cab driver
Photo Credit: X
ನನ್ನ ಕಾರಿನಲ್ಲಿ ಕುಳಿತು ಸ್ಮೋಕಿಂಗ್ ಮಾಡಲು ನನ್ನ ಪರ್ಮಿಷನ್ ತಗೊಂಡ್ರಾ.. ಹೀಗಂತ ಕ್ಯಾಬ್ ಚಾಲಕನೊಬ್ಬ ಗ್ರಾಹಕರಿಗೆ ಧೈರ್ಯವಾಗಿ ಪ್ರಶ್ನೆ ಮಾಡಿದ ವಿಡಿಯೋಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.
 

ನಮ್ಮಲ್ಲಿ ಕೆಲವರಿಗೆ ದುಡ್ಡಿನ ಮದವೋ, ಅಧಿಕಾರದ ದರ್ಪವೋ, ಕ್ಯಾಬ್ ಚಾಲಕರೆಂದರೆ ಕಾಲ ಕಸದಂತೆ ಕಾಣುತ್ತಾರೆ. ಅದೂ ಒಂದು ಗೌರವಯುತ ಕೆಲಸ ಎಂದು ಯಾರೂ ಅಂದುಕೊಳ್ಳುವುದಿಲ್ಲ. ಇಲ್ಲಿಯೂ ಗ್ರಾಹಕರೊಬ್ಬರು ಇದೇ ರೀತಿ ದರ್ಪದಿಂದ ವರ್ತಿಸಿದ್ದಾರೆ.

ನಾನು ದುಡ್ಡು ಕೊಟ್ಟ ಮೇಲೆ ನಾನು ಹೇಳಿದಂತೆ ಕೇಳಬೇಕು ಎಂದು ಅನೇಕ ಗ್ರಾಹಕರು ಅಹಂಕಾರದ ನಡತೆ ಪ್ರದರ್ಶಿಸುತ್ತಾರೆ. ಇಲ್ಲಿ ಅದೇ ರೀತಿ ಕಾರಿನೊಳಗೆ ಕೂತ ಗ್ರಾಹಕ ಲೈಟರ್ ಆನ್ ಮಾಡಿ ಸಿಗರೇಟು ಸೇದಲು ಹೊರಟಿದ್ದಾನೆ.

ಇದು ಚಾಲಕನ ಗಮನಕ್ಕೆ ಬಂದು ತಕ್ಷಣವೇ ಕಾರು ನಿಲ್ಲಿಸಿ, ‘ಸರ್, ನೀವು ಸಿಗರೇಟು ಸೇದಲು ನನ್ನನ್ನು ಕೇಳಿದ್ದೀರಾ? ನನ್ನ ಕಾರಿನೊಳಗೆ ಧೂಮಪಾನ ಮಾಡಬಾರದು’ ಎಂದಿದ್ದಾರೆ.

ಇದಕ್ಕೆ ಗ್ರಾಹಕ ‘ನಾನು ನಿನ್ನನ್ನು ಯಾಕೆ ಕೇಳಬೇಕು? ಇದು ನಿನ್ನ ಕಾರಲ್ಲ, ಟ್ಯಾಕ್ಸಿ ಅಷ್ಟೇ. ನೀನು ನನಗೆ ಧೂಮಪಾನ ಮಾಡಬೇಡ ಎಂದು ಹೇಳುವ ಹಾಗಿಲ್ಲ’ ಎಂದು ದರ್ಪದಿಂದ ಉತ್ತರಿಸುತ್ತಾನೆ.

ಇದಕ್ಕೆ ಸಿಟ್ಟಾದ ಕ್ಯಾಬ್ ಚಾಲಕ ಕಾರಿನಿಂದ ಇಳಿದು ‘ನಾನು ರೈಡ್ ಕ್ಯಾನ್ಸಲ್ ಮಾಡುತ್ತೇನೆ. ನನಗೆ ನಿಮ್ಮ ಹಣ ಬೇಡ. ನನ್ನ ಕಾರಿನಿಂದ ಇಳಿಯಿರಿ, ನಾನು ಟ್ಯಾಕ್ಸಿ ಡ್ರೈವರ್ ಅಷ್ಟೇ, ನಿಮ್ಮ ಕೆಲಸದವನಲ್ಲ’ ಎಂದು ಹೇಳಿ ಹಿಂದಿನ ಡೋರ್ ತೆಗೆದು ಗ್ರಾಹಕನನ್ನು ಇಳಸಿದ್ದಾನೆ. ಈ ವಿಡಿಯೋಗೆ ನೆಟ್ಟಿಗರು ಚಾಲಕನ ಧೈರ್ಯಕ್ಕೆ ಕೊಂಡಾಡಿದ್ದಾರೆ.
  pic.twitter.com/INaDEp8zBS

 

— Lakshay Mehta (@lakshaymehta08) July 8, 2026

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಗಾಳಿ ಸಹಿತ ಭಾರೀ ಮಳೆ