Publish Date: Mon, 06 Jul 2026 (11:36 IST)
Updated Date: Mon, 06 Jul 2026 (11:39 IST)
ಲಕ್ನೋ: ಈ ಬಸ್ ನಲ್ಲಿ ನೀವೇನಾದ್ರೂ ಪ್ರಯಾಣ ಮಾಡಿದ್ರೆ ಯಮಲೋಕ ಗ್ಯಾರಂಟಿ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ಬಸ್‌ನ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಫೋನ್‌ನಲ್ಲಿ ವಿಡಿಯೋ ವೀಕ್ಷಣೆಯಲ್ಲಿ ಮುಳುಗಿರುವ ವಿಡಿಯೋ ಒಂದು ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಂತಹ ವೇಗದ ಹೆದ್ದಾರಿಗಳಲ್ಲಿ ಒಂದು ಸೆಕೆಂಡಿನ ಗಮನ ಭಂಗವೂ ಭೀಕರ ದುರಂತಕ್ಕೆ ಕಾರಣವಾಗಬಹುದು. ನೆಟ್ಟಿಗರು ಮತ್ತು ಪ್ರಯಾಣಿಕರು ವ್ಯಕ್ತಪಡಿಸುತ್ತಿರುವ ಆಕ್ರೋಶ ಸಂಪೂರ್ಣ ನ್ಯಾಯಸಮ್ಮತವಾಗಿದೆ.
ಖಾಸಗಿ ಬಸ್‌ಗಳಲ್ಲಿ ಇದು ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ ಎಂಬುದು ಕಟು ಸತ್ಯ. ಲಾಂಗ್-ರೂಟ್ (ದೂರದ ಪ್ರಯಾಣದ) ಬಸ್‌ಗಳಲ್ಲಿ ರಾತ್ರಿ ವೇಳೆ ಚಾಲಕರು ನಿದ್ದೆ ಗೆಡಿಸಿಕೊಳ್ಳಲು ಅಥವಾ ಮನರಂಜನೆಗಾಗಿ ಫೋನ್ ಬಳಸುವ ದೃಶ್ಯಗಳು ಹೆಚ್ಚಾಗುತ್ತಿವೆ. ಪ್ರಯಾಣಿಕರು ತಮ್ಮ ಪ್ರಾಣವನ್ನು ಚಾಲಕನ ಕೈಗಿಟ್ಟು, ಮೃತ್ಯುವಿನ ಪಕ್ಕದಲ್ಲೇ ಕುಳಿತು ಪ್ರಯಾಣಿಸುವಂತಾಗಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ರಹಸ್ಯವಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರಿಗೆ ಇಲಾಖೆ ಮತ್ತು ಉತ್ತರ ಪ್ರದೇಶ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಒತ್ತಾಯ ಕೇಳಿಬರುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ