Publish Date: Fri, 03 Jul 2026 (14:33 IST)
Updated Date: Fri, 03 Jul 2026 (14:37 IST)
ತನಗೆ ಅನ್ನ ಹಾಕುವ ಮಹಿಳೆಗೆ ಪ್ರತೀ ನಿತ್ಯ ಆಹಾರ ಸೇವಿಸಿದ ಬಳಿಕ ಪಾತ್ರೆಯನ್ನು ಮರೆಯದೇ ತಂದು ಕೊಡುವ ಈ ನಾಯಿ ನೆಟ್ಟಿಗರಿಗೆ ಸೋಜಿಗವುಂಟು ಮಾಡಿದೆ.
ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎನ್ನಲಾಗುತ್ತದೆ. ಆ ಮಾತನ್ನು ಈ ನಾಯಿ ನಿಜ ಮಾಡಿದೆ. ನಿಜವಾದ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಲಿಯಬೇಕೆಂದರೆ, ಮನುಷ್ಯರ ಸಹವಾಸ ಬಿಟ್ಟು ಈ ಮೂಕ ಜೀವಿಯನ್ನು ನೋಡಬೇಕು. ದಿನಾಲೂ ತನಗೆ ಅನ್ನ ಹಾಕುವ ಮಹಿಳೆಗೆ, ತಿಂದ ನಂತರ ಊಟದ ಡಬ್ಬಿಯನ್ನು ಅಷ್ಟೇ ಜಾಗರೂಕತೆಯಿಂದ ಮರಳಿ ತಂದುಕೊಡುವ ಬೀದಿ ನಾಯಿ 'ಮಕ್ತು'ವಿನ ಕಥೆ ಹೃದಯಸ್ಪರ್ಶಿಯಾಗಿದೆ.
ಮಕ್ತು ಎಂಬ ಈ ಶ್ವಾನದ ವರ್ತನೆ ಕೇವಲ ಒಂದು ಅಭ್ಯಾಸವಲ್ಲ; ಅದು ಕೃತಜ್ಞತೆಯ ಪರಮಾವಧಿ. ದಿನವೂ ತನಗೆ ಪ್ರೀತಿಯಿಂದ ಉಣಿಸುವ ಮಹಿಳೆಯ ಬಗ್ಗೆ ಅದಕ್ಕಿರುವ ಗೌರವ ಅಪಾರ. ತನಗೆ ನೀಡಿದ ಆಹಾರದ ಡಬ್ಬಿಯನ್ನು ಎಲ್ಲೋ ಎಸೆದು ಹೋಗದೆ, ಕಚ್ಚಿ ಹಿಡಿದು ತಂದುಕೊಡುವ ಅದರ ಶಿಸ್ತು ಮತ್ತು ಜಾಣ್ಮೆ ನಿಜಕ್ಕೂ ಮನುಷ್ಯರಿಗೇ ಮಾದರಿ.
ಪ್ರಾಣಿಗಳಿಗೆ ಯಾವುದೇ ಸ್ವಾರ್ಥ ಅಥವಾ ದುರಾಲೋಚನೆ ಇರುವುದಿಲ್ಲ. ತಮಗೆ ಸಿಕ್ಕ ಸಣ್ಣ ಪ್ರೀತಿಯನ್ನು ಅವು ಎಂದಿಗೂ ಮರೆಯುವುದಿಲ್ಲ. ಮಕ್ತು ತನ್ನದೇ ಆದ ರೀತಿಯಲ್ಲಿ ಆಕೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದೆ. ಯಾವುದೇ ಹಮ್ಮು-ಬಿಮ್ಮುಗಳಿಲ್ಲದ, ಅತ್ಯಂತ ನಿಸ್ವಾರ್ಥವಾದ ನಿಷ್ಠೆ ಎಂದರೆ ಏನು ಎಂಬುದನ್ನು ಈ ಮೂಕ ಜೀವಿ ಜಗತ್ತಿಗೆ ಸಾರಿ ಹೇಳುತ್ತಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ