Select Your Language

Notifications

webdunia
webdunia
webdunia
webdunia

Shocking video: ನೆಗಡಿ ಎಂದು ಬಂದ ಪುಟ್ಟ ಮಗುವಿಗೆ ಸಿಗರೇಟು ಸೇದಲು ಹೇಳಿಕೊಟ್ಟ ವೈದ್ಯ

Child viral video

Krishnaveni K

ಲಕ್ನೋ , ಗುರುವಾರ, 17 ಏಪ್ರಿಲ್ 2025 (12:11 IST)
Photo Credit: X
ಲಕ್ನೋ: ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ಕೆಲವು ವೈದ್ಯರು ಆ ಪದಕ್ಕೇ ಅವಮಾನವಾಗುವಂತೆ ನಡೆದುಕೊಂಡ ಘಟನೆಗಳೂ ಇವೆ. ಇದೀಗ ಉತ್ತರ ಪ್ರದೇಶದ ಸರ್ಕಾರೀ ವೈದ್ಯರೊಬ್ಬರು ನೆಗಡಿಯಾಗಿದೆ ಎಂದು ಬಂದ ಪುಟಾಣಿ ಮಗುವಿಗೆ ಸಿಗರೇಟು ನೀಡಿದ ಶಾಕಿಂಗ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಶೀತ, ಕೆಮ್ಮು ಎಂದು ಬರುವ ಮಕ್ಕಳಿಗೆ ವೈದ್ಯರು ಸಿರಪ್, ಇಂಜೆಕ್ಷನ್ ನೀಡುತ್ತಾರೆ. ಆದರೆ ಸುರೇಶ್ ಚಂದ್ರ ಎಂಬ ಉತ್ತರ ಪ್ರದೇಶದ ಸರ್ಕಾರೀ ವೈದ್ಯ ನೆಗಡಿಯಾಗಿದೆ ಎಂದು ಬಂದ ಮಗುವಿಗೆ ಒಂದು ಸಿಗರೇಟು ನೀಡಿ ಸೇದಲು ಹೇಳಿದ್ದಾನೆ.

ವೈದ್ಯ ಹೇಳಿದಂತೇ ಪುಟಾಣಿ ಮಗು ಸಿಗರೇಟು ಸೇದಲು ಪ್ರಯತ್ನಿಸಿದೆ. ಇನ್ನೂ ಆ ಮಗುವಿಗೆ ಒಂದೋ, ಒಂದೂವರೆ ವರ್ಷವಿದ್ದಂತಿದೆ. ಏನೂ ಅರಿಯದ ಮುಗ್ಧ ಕಂದಮ್ಮನಿಗೆ ಇಂತಹ ಸಲಹೆ ನೀಡಿದ ವೈದ್ಯನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಆತನ ವಿರುದ್ಧ ಕ್ರಮಕ್ಕೆ ಮುಖ್ಯ ವೈದ್ಯಾಧಿಕಾರಿಗಳು ಆದೇಶ ನೀಡಿದ್ದಾರೆ.

ವೈದ್ಯ ಸುರೇಶ್ ಚಂದ್ರನನ್ನು ಈಗ ವರ್ಗಾವಣೆ ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಮಾರ್ಚ್ 28 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Video: ನಾವು ಹಿಂದೂಗಳಂತಲ್ಲ, ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕಾಗಲ್ಲ: ಪಾಕ್ ಸೇನಾ ಮುಖ್ಯಸ್ಥ