ಇಸ್ಲಾಮಾಬಾದ್: ನಾವು ಹಿಂದೂಗಳಿಗಿಂತ ಭಿನ್ನರು, ಅದಕ್ಕೇ ನಾವು ಪ್ರತ್ಯೇಕ ರಾಷ್ಟ್ರ ಸ್ಥಾಪಿಸಿದ್ದೇವೆ. ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕೆ ಆಗಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದಾರೆ.
ಪಾಕಿಸ್ತಾನದ ವಲಸಿಗರನ್ನುದ್ದೇಶಿಸಿ ಮಾತನಾಡಿರುವ ಮುನೀರ್ ಇಸ್ಲಾಂ ಧರ್ಮವನ್ನು ಹಾಡಿಹೊಗಳಿದ್ದು, ನಾವು ಹಿಂದೂಗಳಿಂತ ಭಿನ್ನರಾಗಿದ್ದೇವೆ ಎಂದಿದ್ದಾರೆ. ಅಲ್ಲದೆ, ಭಾರತದ ವಿರುದ್ಧ ಕಿಡಿ ಕಾರಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸೇರಿದಂತೆ ಪ್ರಮುಖ ನಾಯಕರ ಮುಂದೆ ಮುನೀರ್ ತಮ್ಮ ದೇಶದ ಬಗ್ಗೆ ಉದ್ದುದ್ದ ಭಾಷಣ ಮಾಡಿದ್ದಾರೆ. ನಾವು ಶೀಘ್ರದಲ್ಲೇ ಭಯೋತ್ಪಾದಕರ ಬೆನ್ನು ಮುರಿಯಲಿದ್ದೇವೆ. 13 ಲಕ್ಷ ಜನರ ಭಾರತೀಯ ಸೇನೆಗೇ ನಮ್ಮನ್ನು ಹೆಸರಿಸಲಾಗಲಿಲ್ಲ. ಇನ್ನು, 15 ಸಾವಿರ ಭಯೋತ್ಪಾದಕರಿಗೆ ಹೆದರುತ್ತೇವಾ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು, ನಾವು ಹಿಂದೂಗಳಿಗಿಂತ ಭಿನ್ನರು, ನಮ್ಮ ಯೋಚನೆ, ಪ್ರವೃತ್ತಿ ಎಲ್ಲವೂ ವಿಭಿನ್ನ. ಹೀಗಾಗಿ ನಮ್ಮ ಪೂರ್ವಜರು ಬೇರೆ ದೇಶವನ್ನು ಸ್ಥಾಪಿಸಿದ್ದಾರೆ. ನಾವು ಒಂದೇ ದೇಶವಲ್ಲ, ನಮ್ಮದು ಬೇರೆ ಬೇರೆ ದೇಶ. ಪಾಕಿಸ್ತಾನದ ಮಕ್ಕಳಿಗೆ ನಮ್ಮ ದೇಶದ ಬಗ್ಗೆ ಕಥೆಗಳನ್ನು ಹೇಳಬೇಕು. ಪಾಕಿಸ್ತಾನದ ಪೂರ್ವಜರ ಕಥೆಗಳನ್ನು ಹೇಳಬೇಕು. ಮೂರನೇ ತಲೆಮಾರು, ನಾಲ್ಕನೇ ತಲೆಮಾರು ದುರ್ಬಲವಾಗಬಾರದು. ವಿದೇಶದಲ್ಲಿ ವಾಸಿಸುವ ಪಾಕಿಸ್ತಾನಗಳು ನಮಗೆ ಆರ್ಥಿಕ ಸಹಾಯ ಮಾಡಬೇಕು. ನೀವು ಹಣವನ್ನು ಕಳುಹಿಸುವ ಮೂಲಕ ನಿಮ್ಮ ದೇಶದ ಮೇಲಿನ ಪ್ರೀತಿಯನ್ನು ತೋರಿಸುತ್ತೀರಿ. ನೀವು ಣ ಕಳುಹಿಸುತ್ತಿರಿ, ನಾವು ಕಾಶ್ಮೀರವನ್ನು ಎಂದೂ ನಮ್ಮ ಕೈ ತಪ್ಪಿಹೋಗಲು ಬಿಡಲ್ಲ ಎಂದು ಕೊಚ್ಚಿಕೊಂಡಿದ್ದಾರೆ.