Select Your Language

Notifications

webdunia
webdunia
webdunia
webdunia

ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಗೆ ಲಗ್ಗೆಯಿಟ್ಟ ಭಾರತ

Hockey India

Sampriya

ಹುಲುನ್‌ಬುಯಿರ್‌ , ಶನಿವಾರ, 14 ಸೆಪ್ಟಂಬರ್ 2024 (15:56 IST)
Photo Courtesy X
ಹುಲುನ್‌ಬುಯಿರ್‌: ಭಾರತ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶನಿವಾರ ತನ್ನ ಸಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನವನ್ನು ಬಗ್ಗು ಬಡಿದು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಹರ್ಮನ್ ಪ್ರೀತ್ ಸಿಂಗ್ ನೇತೃತ್ವಸ ಭಾರತ ತಂಡವು 2-1ಗೋಲುಗಳಿಂದ ಪಾಕಿಸ್ತಾನವನ್ನು ಸದೆಬಡಿಯಿತು. ಈ ಮೂಲಕ ಹಾಲಿ ಚಾಂಪಿಯನ್ ಭಾರತ ತಂಡವು ಟೂರ್ನಿಯಲ್ಲಿ ಗೆಲುವುನ ನಗಾಲೋಟವನ್ನು ಮುಂದುವರೆಸಿದೆ.

ಭಾರತ ತಂಡದ ಪರ ಹರ್ಮನ್‌ಪ್ರೀತ್ ಸಿಂಗ್‌ ಎರಡು ಗೋಲುಗಳನ್ನು ಹೊಡೆದು ತಂಡದ ಗೆಲುವಿಗೆ ಕಾರಣರಾದರು. ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿರುವ ಭಾರತ ಈಗಾಗಲೇ ಸೆಮಿಫೈನಲ್‌ ಸ್ಥಾನವನ್ನು ಕಾಯ್ದಿರಿಸಿತ್ತು.  

ಆರು ತಂಡಗಳಿರುವ ಕಣದಲ್ಲಿ ಭಾರತ ಆಡಿರುವ ಐದು ಪಂದ್ಯಗಳನ್ನು ಹೆಚ್ಚಿನ ಪ್ರಯಾಸವಿಲ್ಲದೇ ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ 2024ರಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಭೇಟಿಯಾದ ರಾಧಿಕಾ ಶರತ್ ಕುಮಾರ್