Select Your Language

Notifications

webdunia
webdunia
webdunia
webdunia

ಮತ್ತೊಂದು ಪದಕದ ನಿರೀಕ್ಷೆಯಲ್ಲಿ ಭಾರತ: ಬ್ರಿಟನ್ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ

India Hockey Team Entered Semi Final

Sampriya

ಪ್ಯಾರಿಸ್ , ಭಾನುವಾರ, 4 ಆಗಸ್ಟ್ 2024 (16:14 IST)
Photo Courtesy X
ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ಅನ್ನು ಮಣಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಭಾರತದ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕಕ್ಕೆ ಭಾರತ ಒಂದು ಗೆಲುವಿನ ಅಂತರದಲ್ಲಿದೆ. ಮುಂದೆ ನಡೆಯುವ ಸೆಮಿಫೈನಲ್‌ನಲ್ಲಿ ಜರ್ಮನಿ ಅಥವಾ ಅರ್ಜೆಂಟೀನಾವನ್ನು ಭಾರತ ಎದುರಿಸಲಿದೆ.

ನಿಗದಿತ ಸಮಯದಲ್ಲಿ 1-1 ರಿಂದ ಸಮಬಲಗೊಂಡ ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಭಾರತ 4-2 ರಿಂದ ಜಯಗಳಿಸಿತು.
ಪಂದ್ಯದ 17 ನೇ ನಿಮಿಷದಲ್ಲಿ 10 ಆಟಗಾರರಿಗೆ ಇಳಿಸಲ್ಪಟ್ಟ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿದ ನಂತರ ಲೀ ಮಾರ್ಟನ್ ಐದು ನಿಮಿಷಗಳ ನಂತರ ಗ್ರೇಟ್ ಬ್ರಿಟನ್‌ಗೆ ಸಮಬಲ ಸಾಧಿಸಿದರು.

ಪೂರ್ಣಾವಧಿಯ ನಂತರ ಪಂದ್ಯ 1-1 ರಲ್ಲಿ ಸಮಬಲಗೊಂಡಿತು. ಕೊನೆಗೆ ನಡೆದ ಶೂಟ್‌ ಜೌಟ್‌ನಲ್ಲಿ ಎರಡು ತಂಡಗಳಿಗೆ 5 ಗುರಿ ನೀಡಿತು. ಇದರಲ್ಲಿ ಭಾರತವು ಶೂಟ್-ಔಟ್ ಅನ್ನು 4-2 ರಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ಆಘಾತ: ಭಾರತದ ವಿರುದ್ಧದ ಸರಣಿಯಿಂದ ವನಿಂದು ಹೊರಕ್ಕೆ