Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ಆಘಾತ: ಭಾರತದ ವಿರುದ್ಧದ ಸರಣಿಯಿಂದ ವನಿಂದು ಹೊರಕ್ಕೆ

Sri Lankan cricket

Sampriya

ಕೊಲಂಬೊ , ಭಾನುವಾರ, 4 ಆಗಸ್ಟ್ 2024 (11:37 IST)
Photo Courtesy X
Photo Courtesy X
ಕೊಲಂಬೊ:  ಭಾರತ ಮತ್ತು ಶ್ರೀಲಂಕಾ ನಡುವೆ ಎರಡನೇ ಏಕದಿನ ಪಂದ್ಯ ಭಾನುವಾರ ನಡೆಯಲಿದೆ. ಅದಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್‌ಗೆ ಆಘಾತ ಎದುರಾಗಿದೆ.

ಲಂಕಾ ತಂಡದ ಆಲ್​ರೌಂಡರ್ ವನಿಂದು ಹಸರಂಗ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹಸರಂಗ ಇದೀಗ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಉಳಿದೆರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಹಸರಂಗ 24 ರನ್​ಗಳ ಕೊಡುಗೆ ನೀಡಿದ್ದರು. ಹಾಗೆಯೇ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಆ ಪಂದ್ಯವು ಟೈ ಆಗಿತ್ತು.

ಇದೀಗ ಗಾಯದ ಕಾರಣ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಂದ ಹಸರಂಗ ಹೊರಗುಳಿಯಲು ನಿರ್ಧರಿಸಿದ್ದಾರೆ. ಇನ್ನು ಹಸರಂಗ ಅವರ ಬದಲಿಯಾಗಿ ಜೆಫ್ರಿ ವಾಂಡರ್ಸೆ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಭಾರತದ ವಿರುದ್ಧದ ಏಕದಿನ ಸರಣಿಯಿಂದ ಈವರೆಗೆ ಒಟ್ಟು 5 ಆಟಗಾರರು ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ದಿಲ್ಶಾನ್ ಮಧುಶಂಕ ಈ ಸರಣಿಯಿಂದ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಭುಜದ ನೋವಿನ ಕಾರಣ ಮಥೀಶ ಪತಿರಾಣ ಕೂಡ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದರು.

ಇದಕ್ಕೂ ಮುನ್ನ ಉಸಿರಾಟದ ಸೋಂಕಿನ ಕಾರಣ ದುಷ್ಮಂತ ಚಮೀರ ಹೊರಗುಳಿದರೆ, ನುವಾನ್ ತುಷಾರ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಇದೀಗ ವನಿಂದು ಹಸರಂಗ ಕೂಡ ಗಾಯದ ಕಾರಣ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ಸ್‌ನಲ್ಲಿ ಬಾಕ್ಸರ್‌ ನಿಶಾಂತ್‌ ದೇವ್‌ಗೆ ಸೋಲು: ಭಾರತಕ್ಕೆ ತಪ್ಪಿದ ಮತ್ತೊಂದು ಪದಕ