ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಭಾರತದ ನಿಶಾಂತ್ ದೇವ್ ಬಾಕ್ಸಿಂಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಅವರು ಈ ಪಂದ್ಯ ಗೆದ್ದಿದ್ದರೆ ಮತ್ತೊಂದು ಪದಕ ಭಾರತಕ್ಕೆ ಖಚಿತವಾಗುತ್ತಿತ್ತು.
ಶನಿವಾರ ತಡರಾತ್ರಿ ನಡೆದ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ಪೈಪೋಟಿ ನೀಡಿದ ಹರಿಯಾಣ ಮೂಲಕ ನಿಶಾಂತ್ ದೇವ್ ಅವರು ಮೆಕ್ಸಿಕೊದ ಮಾರ್ಕೊ ವೆರ್ಡೆ ವಿರುದ್ಧ ಸೋತರು.
23 ವರ್ಷದ ನಿಶಾಂತ್ ಅವರು ಈ ಒಲಿಂಪಿಕ್ಸ್‌ನಲ್ಲಿ ಸೋತು ನಿರ್ಗಮಿಸಿದ ಐದನೇ ಬಾಕ್ಸರ್ ನಿಶಾಂತ್. ಮೆಕ್ಸಿಕೊದ ಬಾಕ್ಸರ್ ಅವರ ನಿಖರ ಪಂಚ್‌ಗಳಿಗೆ ಭಾರತದ ಬಾಕ್ಸರ್ ಬಳಿ ಉತ್ತರವಿರಲಿಲ್ಲ. ಆರಂಭದಿಂದಲೂ ಮಾರ್ಕೊಮೇಲುಗೈ ಸಾಧಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತದ ಆರು ಬಾಕ್ಸರ್‌ಗಳು ಕಣಕ್ಕೆ ಇಳಿದಿದ್ದರು. ಇದೀಗ ಬಾಕ್ಸಿಂಗ್ ಅಂಕಣದಲ್ಲಿ ಮಹಿಳೆಯರ ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೈನ್ ಕ್ವಾರ್ಟರ್‌ಫೈನಲ್ ಆಡಲಿದ್ದು, ಏಕಮಾತ್ರ ಪದಕದ ಭರವಸೆಯಾಗಿದ್ದಾರೆ.