ಚೆನ್ನೈ: ಕಾಲಿವುಡ್ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಭೇಟಿಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಲಂಡನ್ ನಿಂದ ನೇರವಾಗಿ ಚೆನ್ನೈಗೆ ಬಂದಿಳಿದಿದ್ದರು.. ಇತ್ತೀಚೆಗೆ ಕೊಹ್ಲಿ ಲಂಡನ್ ನಲ್ಲಿಯೇ ನೆಲೆಸಿದ್ದು, ಕ್ರಿಕೆಟ್ ಟೂರ್ನಿಗಳ ಸಂದರ್ಭದಲ್ಲಿ ಮಾತ್ರ ಭಾರತಕ್ಕೆ ಬರುತ್ತಿದ್ದಾರೆ. ಅದರಂತೆ ಈಗ ಚೆನ್ನೈಗೆ ಬಂದಿದ್ದಾರೆ.
ಲಂಡನ್ ನಿಂದ ಚೆನ್ನೈಗೆ ಬರುವ ವಿಮಾನದಲ್ಲಿ ಅವರನ್ನು ನಟಿ ರಾಧಿಕಾ ಶರತ್ ಕುಮಾರ್ ಭೇಟಿ ಮಾಡಿದ್ದಾರೆ. ಅವರೂ ಕೂಡಾ ಲಂಡನ್ ನಿಂದ ಅದೇ ವಿಮಾನದಲ್ಲಿ ಚೆನ್ನೈಗೆ ಬಂದಿದ್ದರು. ಈ ವೇಳೆ ತಮ್ಮ ಮೆಚ್ಚಿನ ಕ್ರಿಕೆಟಿಗನ ಜೊತೆ ರಾಧಿಕಾ ಸೆಲ್ಫೀ ತೆಗೆಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಕೋಟ್ಯಾಂತರ ಜನರ ಹೃದಯದಲ್ಲಿ ಸ್ಥಾನ ಪಡೆದ, ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡುವ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದೆ. ಅವರ ಜೊತೆ ಪ್ರಯಾಣ ಮಾಡಿದ್ದು ಖುಷಿ ನೀಡಿತು. ಮುಂದಿನ ಸರಣಿಗಾಗಿ ಅವರು ಚೆನ್ನೈಗೆ ಬರುತ್ತಿದ್ದರು. ಈ ಸೆಲ್ಫೀಗೆ ಧನ್ಯವಾದಗಳು ಎಂದು ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.