ಬೆಂಗಳೂರು: ಮುಂದಿನ ಐಪಿಎಲ್ ನಲ್ಲಿ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿದೆ. ಇದೀಗ ಅರ್ ಸಿಬಿ ಫ್ಯಾನ್ಸ್ ಹೇಗಾದರೂ ಸರಿಯೇ ನಮಗೋಸ್ಕರ ಮುಂದಿನ ಐಪಿಎಲ್ ಗೆ ಕೆಎಲ್ ರಾಹುಲ್ ರನ್ನು ಖರೀದಿಸಿ ಎಂದು ವಿರಾಟ್ ಕೊಹ್ಲಿಗೆ ಮೊರೆಯಿಡುತ್ತಿದ್ದಾರೆ.
ಬೆಂಗಳೂರು ತಂಡದ ಪ್ರಭಾವೀ ಆಟಗಾರ ಕೊಹ್ಲಿ. ಅವರ ಮಾತಿಗೆ ಫ್ರಾಂಚೈಸಿ ಕೂಡಾ ಬೆಲೆ ಕೊಡುತ್ತದೆ. ಹೀಗಾಗಿ ರಾಹುಲ್ ರನ್ನು ಖರೀದಿ ಮಾಡುವಂತೆ ಅಭಿಮಾನಿಗಳು ಕೊಹ್ಲಿಗೆ ಬೇಡಿಕೆಯಿಟ್ಟಿದ್ದಾರೆ. ರಾಹುಲ್ ನಮ್ಮ ಕರ್ನಾಟಕದ ಆಟಗಾರ. ಹೀಗಾಗಿ ಅವರು ಆರ್ ಸಿಬಿಗೆ ಬರಬೇಕು ಎಂಬುದು ಅಭಿಮಾನಿಗಳ ಆಗ್ರಹ.
ಹೇಗಿದ್ದರೂ ಆರ್ ಸಿಬಿ ಮುಂದಿನ ಸೀಸನ್ ಗೆ ಹೊಸ ನಾಯಕನನ್ನು ನೇಮಿಸಬಹುದು. ಆ ಸ್ಥಾನಕ್ಕೆ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಕೆಎಲ್ ರಾಹುಲ್ ಸೂಕ್ತ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಆರ್ ಸಿಬಿ ತಂಡದಲ್ಲಿ ಲೋಕಲ್ ಪ್ರತಿಭೆಗಳ ಕೊರತೆಯಿದೆ. ಹೀಗಾಗಿ ಕೆಎಲ್ ರಾಹುಲ್ ರನ್ನು ತಂಡಕ್ಕೆ ಕರೆಸಿ ಎಂಬ ಬೇಡಿಕೆ ಹೆಚ್ಚಾಗುತ್ತಿದೆ.
ಇದು ಎಷ್ಟರಮಟ್ಟಿಗೆ ಎಂದರೆ ಇತ್ತೀಚೆಗೆ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕೆಎಲ್ ರಾಹುಲ್ ಚಿನ್ನಸ್ವಾಮಿ ಮೈದಾನದಲ್ಲಿ ಆಡುತ್ತಿರುವಾಗ ಅಭಿಮಾನಿಗಳು ಮುಂದಿನ ಆರ್ ಸಿಬಿ ಕ್ಯಾಪ್ಟನ್ ಎಂದು ಕೂಗಿ ಚಿಯರ್ ಅಪ್ ಮಾಡಿದ್ದಾರೆ. ಅಭಿಮಾನಿಗಳ ಬಯಕೆಯಂತೆ ರಾಹುಲ್ ಲಕ್ನೋ ಬಿಟ್ಟು ಬೆಂಗಳೂರಿಗೆ ಬರುತ್ತಾರಾ ನೋಡಬೇಕಿದೆ.