Select Your Language

Notifications

webdunia
webdunia
webdunia
webdunia

ಪ್ಯಾರಿಸ್​ನಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಯ ಕಾಲಿಗೆ ಬಿದ್ದ ಅಪ್ಪಟ ಅಭಿಮಾನಿ

Mahendra Singh DhonI

Sampriya

ಚೆನ್ನೈ , ಮಂಗಳವಾರ, 11 ಜೂನ್ 2024 (17:15 IST)
Photo Courtesy X
ಚೆನ್ನೈ: ಐಪಿಎಲ್‌ ಟೂರ್ನಿ ಮುಗಿದ ಬೆನ್ನಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಹಾಗೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಕುಟುಂಬದ ಜತೆ ಪ್ಯಾರಿಸ್​ ಪ್ರವಾಸದಲ್ಲಿದ್ದಾರೆ.

ಪ್ಯಾರಿಸ್‌ನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾ ತಮ್ಮ ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದಾರೆ. ಕಳೆದ ವಾರ ಧೋನಿ ಅವರ ಪತ್ನಿ ಸಾಕ್ಷಿ ಅವರು ಪ್ರವಾಸದ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಅಭಿಮಾನಿಯೊಬ್ಬ ಧೋನಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾನೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ಯಾರಿಸ್​ನ ಪ್ರವಾಸಿ ಸ್ಥಳವೊಂದಕ್ಕೆ ಭೇಟಿ ನೀಡಿದ ಸಂದರ್ಭ ಅವರ ಅಭಿಮಾನಿಯೊಬ್ಬ ಧೋನಿ ಅವರ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ಧೋನಿ ಆತನಿಗೆ ಆಶೀರ್ವಾದ ಮಾಡಿದ್ದಾರೆ. ಈ ಫೋಟೊವನ್ನು ಕಂಡ ಧೋನಿ ಅಭಿಮಾನಿಗಳು ನೀವು ನಿಜವಾಗಿಯೂ ಅದೃಷ್ಟಶಾಲಿ ಎಂದು ಕಮೆಂಟ್‌ ಮಾಡಿದ್ದಾರೆ.

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಇದುವರೆಗೆ ತಮ್ಮ ನಿವೃತ್ತಿ ಪ್ರಕಟಿಸಿಲ್ಲ. ಮುಂದಿನ ಬಾರಿಯೂ ಅವರು ಆಡಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಬದಲು ಯಶಸ್ವಿ ಜೈಸ್ವಾಲ್ ಓಪನರ್ ಆಗಲಿ