Select Your Language

Notifications

webdunia
webdunia
webdunia
webdunia

ಭಾರತ, ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯ ಟಿಕೆಟ್ ಬೆಲೆ ಎಷ್ಟು

Chennai stadium

Krishnaveni K

ಚೆನ್ನೈ , ಮಂಗಳವಾರ, 10 ಸೆಪ್ಟಂಬರ್ 2024 (08:42 IST)
Photo Credit: Facebook
ಚೆನ್ನೈ: ಬಹಳ ದಿನಗಳ ಬ್ರೇಕ್ ನ ನಂತರ ಟೀಂ ಇಂಡಿಯಾ ಮತ್ತೆ ಹೊಸ ಸರಣಿಗೆ ಸಜ್ಜಾಗುತ್ತಿದೆ. ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟಿಕೆಟ್ ಬೆಲೆ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 19 ರಿಂದ 23 ರವರೆಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರವರೆಗೆ ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಈ ಪೈಕಿ ಮೊದಲ ಪಂದ್ಯಕ್ಕೆ ಟಿಕೆಟ್ ದರ ಈಗಾಗಲೇ ನಿಗದಿಯಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ 1,000 ರೂ.ಗಳಿಂದ ತೊಡಗಿ 15,000 ರೂ.ಗಳವರೆಗಿದೆ. ಸಾಮಾನ್ಯ ಸೀಟ್ ಗೆ 1,000 ರೂ. ಸಿ,ಡಿ, ಇ ಬಾಕ್ಸ್ ಗೆ 2,000 ರೂ., ಕೆಎಂಕೆ ಟೆರೇಸ್ ಸೀಟ್ ಗೆ 5,000 ರೂ. ನಿಗದಿಯಾಗಿದೆ.

ಈ ಸರಣಿ ಭಾರತಕ್ಕೆ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಮೊನ್ನೆಯಷ್ಟೇ ರೋಹಿತ್ ಶರ್ಮಾ ನೇತೃತ್ವವದಲ್ಲಿ 16 ಸದಸ್ಯರ ಟೀಂ ಇಂಡಿಯಾ ಬಳಗವನ್ನು ಘೋಷಿಸಲಾಗಿದೆ. ಬಹಳ ದಿನಗಳ ನಂತರ ಕ್ರಿಕೆಟ್ ಸರಣಿ ನಡೆಯುತ್ತಿರುವುದರಿಂದ ಸಾಕಷ್ಟು ಅಭಿಮಾನಿಗಳು ಮೈದಾನಕ್ಕೆ ಬರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಧನ್ಯವಾದ ಸಲ್ಲಿಸಿದ ಕೆಎಲ್ ರಾಹುಲ್: ಆರ್ ಸಿಬಿ ಬಾ ಮಗ ಎಂದ ಫ್ಯಾನ್ಸ್