Select Your Language

Notifications

webdunia
webdunia
webdunia
webdunia

ಅಂತೂ ಇಂತೂ ಲಂಡನ್ ಬಿಟ್ಟು ಭಾರತಕ್ಕೆ ಬಂದ ವಿರಾಟ್ ಕೊಹ್ಲಿ

Virat Kohli

Krishnaveni K

ಚೆನ್ನೈ , ಶುಕ್ರವಾರ, 13 ಸೆಪ್ಟಂಬರ್ 2024 (11:08 IST)
ಚೆನ್ನೈ: ಇತ್ತೀಚೆಗಿನ ದಿನಗಳಲ್ಲಿ ಲಂಡನ್ ನಲ್ಲಿಯೇ ಪತ್ನಿ, ಮಕ್ಕಳ ಜೊತೆ ಬೀಡುಬಿಟ್ಟಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಕೊನೆಗೂ ಭಾರತಕ್ಕೆ ಬಂದಿಳಿದಿದ್ದಾರೆ.

ಮುಂದಿನ ವಾರದಿಂದ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೆ ವಿರಾಟ್ ಕೊಹ್ಲಿ ಕೂಡಾ ಆಯ್ಕೆಯಾಗಿದ್ದಾರೆ. ಹೀಗಾಗಿ ಈಗ ಸರಣಿ ಆರಂಬಕ್ಕೆ ಒಂದು ವಾರಕ್ಕೆ ಮುನ್ನ ಭಾರತಕ್ಕೆ ಬಂದಿಳಿದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಬಂದಳಿದಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದರಲ್ಲಿ ಭಾಗಿಯಾಗಲು ಲಂಡನ್ ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದಿದ್ದಾರೆ. ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ ಬಳಿಕ ಲಂಡನ್ ಗೆ ಹಾರಿದ್ದ ಕೊಹ್ಲಿ ಲಂಕಾ ಸರಣಿಗೆ ನೇರವಾಗಿ ಅಲ್ಲಿಗೇ ಬಂದಿಳಿದಿದ್ದರು.

ಅದಾದ ಬಳಿಕ ಲಂಕಾದಿಂದಲೇ ಲಂಡನ್ ಗೆ ತೆರಳಿದ್ದರು. ಇದೀಗ ಮತ್ತೆ ಭಾರತಕ್ಕೆ ಬಂದಿದ್ದಾರೆ. ಕಳೆದ ವಾರ ಕೊಹ್ಲಿ ಪತ್ನಿ ಅನುಷ್ಕಾ ಮುಂಬೈಗೆ ಬಂದು ಮತ್ತೆ ಲಂಡನ್ ಗೆ ತೆರಳಿದ್ದರು. ಹೀಗಾಗಿ ಕೊಹ್ಲಿ ದಂಪತಿ ಮುಂದಿನ ದಿನಗಳಲ್ಲಿ ಲಂಡನ್ ನಲ್ಲಿಯೇ ನೆಲೆಸುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ನಡುವಿನ ವೈಮನಸ್ಯಕ್ಕೆ ಸಾಕ್ಷಿಯಾದ ಟ್ವೀಟ್