Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ನಡುವಿನ ವೈಮನಸ್ಯಕ್ಕೆ ಸಾಕ್ಷಿಯಾದ ಟ್ವೀಟ್

Suryakumar Yadav

Krishnaveni K

ಮುಂಬೈ , ಶುಕ್ರವಾರ, 13 ಸೆಪ್ಟಂಬರ್ 2024 (09:18 IST)
ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ನಡುವೆ ವೈಮನಸ್ಯವಿದೆ ಎಂಬ ಅನುಮಾನ ಈಗ ಅಭಿಮಾನಿಗಳಿಗೆ ಮೂಡಿದೆ. ಇದಕ್ಕೆ ಕಾರಣ ಸೂರ್ಯಕುಮಾರ್ ಟ್ವೀಟ್.

ದುಲೀಪ್ ಟ್ರೋಫಿಯಲ್ಲಿ ಮುಂಬೈನ ಶಂಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಅರ್ಧಶತಕ ಸಿಡಿಸಿದ್ದಕ್ಕೆ ಸೂರ್ಯಕುಮಾರ್ ಯಾದವ್ ಟ್ವೀಟ್ ಮಾಡಿ ಅಭಿನಂದಿಸಿದ್ದರು. ಮುಂಬೈ ಮತ್ತು ಇದೀಗ ಇಂಡಿಯಾ ಸಂಕಷ್ಟದಲ್ಲಿದ್ದಾಗ ಕಾಪಾಡುವವರು ನೀವು. ಈ ಪಯಣವನ್ನು ಎಂಜಾಯ್ ಮಾಡಿ ಎಂದು ಸೂರ್ಯಕುಮಾರ್ ಟ್ವೀಟ್ ಮಾಡಿದ್ದರು.

ಆದರೆ ಇಂದು ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ ಶತಕ ಸಿಡಿಸಿ ಮಿಂಚಿದ್ದರು. ಆದರೆ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರನ ಇನಿಂಗ್ಸ್ ಬಗ್ಗೆ ಇಶಾನ್ ಒಂದೇ ಒಂದು ಮಾತು ಹೇಳದೇ ಇರುವುದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ. ಇಶಾನ್ ಕಿಶನ್ ಗೆ ಯಾಕೆ ಅಭಿನಂದಿಸಿಲ್ಲ. ಅವರು ಮುಂಬೈ ತಂಡದಲ್ಲಿ ಇರೋದು ಅಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಹಿಂದೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ವೇಳೆಯೇ ಇಶಾನ್ ಕಿಶನ್ ಅಸಮಾಧಾನಗೊಂಡಿದ್ದು. ಹೀಗಾಗಿ ಇಬ್ಬರ ನಡುವೆ ಅಂದಿನಿಂದಲೇ ವೈಮನಸ್ಯ ಶುರುವಾಗಿತ್ತಾ ಎಂಬ ಅನುಮಾನವೂ ಈಗ ಅಭಿಮಾನಿಗಳಿಗೆ ಶುರುವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನನ್ನು ಹಾರ್ದಿಕ್ ಪಾಂಡ್ಯ ಬಳಿ ಬಿಟ್ಟು ಬಾಯ್ ಫ್ರೆಂಡ್ ಜೊತೆ ನತಾಶಾ ಸುತ್ತಾಟ