Select Your Language

Notifications

webdunia
webdunia
webdunia
webdunia

ಮಗನನ್ನು ಹಾರ್ದಿಕ್ ಪಾಂಡ್ಯ ಬಳಿ ಬಿಟ್ಟು ಬಾಯ್ ಫ್ರೆಂಡ್ ಜೊತೆ ನತಾಶಾ ಸುತ್ತಾಟ

Hardik Pandya

Krishnaveni K

ಮುಂಬೈ , ಗುರುವಾರ, 12 ಸೆಪ್ಟಂಬರ್ 2024 (13:57 IST)
ಮುಂಬೈ: ಇತ್ತೀಚೆಗಷ್ಟೇ ವಿಚ್ಛೇದನ ಘೋಷಿಸಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಈಗ ಹೊಸ ಬಾಯ್ ಫ್ರೆಂಡ್ ಕಂಡುಕೊಂಡಿದ್ದಾರೆ. ಮಗನನ್ನು ಹಾರ್ದಿಕ್ ಬಳಿ ಬಿಟ್ಟು ನತಾಶಾ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ.

ಹಾರ್ದಿಕ್ ಜೊತೆ ವಿಚ್ಛೇದನದ ಬಳಿಕ ನತಾಶಾ ತಮ್ಮ ತವರು ಸರ್ಬಿಯಾಗೆ ಮರಳಿದ್ದರು. ಎರಡು ತಿಂಗಳ ಬಳಿಕ ಮತ್ತೆ ನತಾಶಾ ಭಾರತಕ್ಕೆ ವಾಪಸಾಗಿದ್ದಾರೆ. ಮುಂಬೈಗೆ ಬಂದಿಳಿದ ತಕ್ಷಣ ಮಗ ಅಗಸ್ತ್ಯನನ್ನು ತಂದೆ ಹಾರ್ದಿಕ್ ಪಾಂಡ್ಯ ಬಳಿ ಬಿಟ್ಟಿದ್ದಾರೆ. ಕೆಲವು ದಿನ ಅಗಸ್ತ್ಯ ತಂದೆಯ ಜೊತೆ ಕಾಲ ಕಳೆಯಲಿದ್ದಾನೆ.

ಈ ನಡುವೆ ನತಾಶಾ ಹೊಸ ಗೆಳೆಯನನ್ನು ಕಂಡುಕೊಂಡಿದ್ದಾರೆ. ತಮ್ಮ  ಬಾಯ್ ಫ್ರೆಂಡ್ ಅಲೆಕ್ಸಾಂಡರ್ ಇಲಾಕ್ ಜೊತೆ ನತಾಶಾ ಮುಂಬೈನಲ್ಲಿ ಸುತ್ತಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾರ್ದಿಕ್ ರಿಂದ ದೂರವಾದ ಕೆಲವೇ ದಿನಗಳಲ್ಲಿ ನತಾಶಾ ಹೊಸ ಪಾರ್ಟನರ್ ರನ್ನು ಕಂಡುಕೊಂಡಿದ್ದಾರೆ.

ಆದರೆ ಇತ್ತ ಹಾರ್ದಿಕ್ ಹೆಸರು ಕೆಲವು ನಟಿಯರೊಂದಿಗೆ ಥಳುಕು ಹಾಕಿಕೊಂಡಿದ್ದರೂ ಇನ್ನೂ ಯಾವುದೂ ಕನ್ ಫರ್ಮ್ ಆಗಿಲ್ಲ. ಕೆಲವು ದಿನಗಳ ಹಿಂದೆ ವಿದೇಶ ಪ್ರವಾಸದಲ್ಲಿದ್ದ ಹಾರ್ದಿಕ್ ಜೊತೆ ಬ್ರಿಟಿಷ್ ಮಾಡೆಲ್ ಒಬ್ಬಳು ಇರುವುದಾಗಿ ವರದಿಯಾಗಿತ್ತು. ಇದಲ್ಲದೆ ನಟಿ ಅನನ್ಯಾ ಪಾಂಡೆ ಜೊತೆಗೂ ಹಾರ್ದಿಕ್ ಹೆಸರು ಕೇಳಿಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ICC ಟೆಸ್ಟ್ ಶ್ರೇಯಾಂಕದಲ್ಲಿ ಭಾರತೀಯರದ್ದೇ ಸಿಂಹಪಾಲು