Select Your Language

Notifications

webdunia
webdunia
webdunia
webdunia

ಭಾರತಕ್ಕೆ ಮತ್ತೊಂದು ಕಂಚು: ಗೋಲ್ ಕೀಪರ್‌ ಶ್ರೀಜೆಶ್‌ಗೆ ಪದಕದ ವಿದಾಯ

ಭಾರತಕ್ಕೆ ಮತ್ತೊಂದು ಕಂಚು: ಗೋಲ್ ಕೀಪರ್‌ ಶ್ರೀಜೆಶ್‌ಗೆ ಪದಕದ ವಿದಾಯ

Sampriya

ಪ್ಯಾರಿಸ್‌ , ಗುರುವಾರ, 8 ಆಗಸ್ಟ್ 2024 (19:18 IST)
Photo Courtesy X
ಪ್ಯಾರಿಸ್‌: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡವನ್ನು ಸ್ಪೇನ್ ತಂಡವನ್ನು ಮಣಿಸಿ ಕಂಚು ಗೆಲ್ಲುವ ಮೂಲಕ ಅನುಭವಿ ಗೋಲ್ ಕೀಪರ್ ಶ್ರೀಜೆಶ್‌ ಪದಕದೊಂದಿಗೆ ವಿದಾನ ನೀಡಿದೆ.

ಈ ಟೂರ್ನಿಯೊಂದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಶ್ರೀಜೆಶ್‌ ಅವರಿಗೆ ಇದು ನಾಲ್ಕನೇ ಒಲಿಂಪಿಕ್ಸ್ ಆಗಿತ್ತು. ಅವರು ಈ ಹಿಂದೆಯೇ ಇದು ಕೊನೆಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದಾಗಿ ವಿದಾಯದ ಘೋಷಣೆ ಮಾಡಿದ್ದರು.

ಟೂರ್ನಿಯೊಂದಕ್ಕೂ ತಮಗಿಂತ ಉತ್ತಮ ರ್ಯಾಂಕಿಗ್‌ನ ತಂಡಗಳನ್ನು ಬಗ್ಗು ಬಡಿದು ಸೆಮಿಫೈನಲ್‌ ತಲುಪಿದ್ದ ಹರ್ಮನ್ ಪ್ರೀತ್ ಪಡೆಯೂ ಜರ್ಮನ್ ವಿರುದ್ಧ ಸೋತಿತ್ತು.  ಕಂಚಿನ ಪದಕ್ಕಾಗಿ ಸ್ಪೇನ್ ಜತೆ ಸೆಣೆಸಾಟ ನಡೆಸಿ 2-1 ಗೋಲ್‌ಗಳಿಂದ ಪದಕದೊಂದಿಗೆ ತಾಯ್ನಾಡಿಗೆ ವಾಪಾಸ್ಸಾಗಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಪುರುಷರ ತಂಡವೂ ಕಂಚಿನ ಪದಕ ಗೆದ್ದು ಕೊಂಡಿತು. ಅದೇ ಸಾಧನೆಯನ್ನು ಈ ಬಾರಿಯೂ ಮಾಡಿದ್ದು, ಪದಕದ ಬಣ್ಣ ಬದಲಾಯಿಸುವ ಪ್ರಯತ್ನ  ಕೈಗೂಡಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್ 2024, ಕುಸ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಮನ್ ಸೆಹ್ರಾವತ್