Select Your Language

Notifications

webdunia
webdunia
webdunia
webdunia

ವಿನೇಶ್‌ ಫೋಗಟ್ ಅನುಭವಿ ಕುಸ್ತಿಪಟು, ತಪ್ಪಿನ ಹೊಣೆಯನ್ನು ಆಕೆಯೂ ಹೊರಬೇಕು: ಸೈನಾ ಕಿಡಿ

ವಿನೇಶ್‌ ಫೋಗಟ್ ಅನುಭವಿ ಕುಸ್ತಿಪಟು, ತಪ್ಪಿನ ಹೊಣೆಯನ್ನು ಆಕೆಯೂ ಹೊರಬೇಕು: ಸೈನಾ ಕಿಡಿ

Sampriya

ಹೈದರಾಬಾದ್ , ಗುರುವಾರ, 8 ಆಗಸ್ಟ್ 2024 (16:57 IST)
Photo Courtesy X
ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ತಪ್ಪಿನ ಹೊಣೆಯನ್ನು ವಿನೇಶ್ ಅವರೇ ಹೊರಬೇಕೆಂದು ಎಂದು ನೇರವಾಗಿ ಹೇಳಿದ್ದಾರೆ.  

ಭಾರತದ ಕುಸ್ತಿಪಟುವನ್ನು ಬುಧವಾರ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು ಮತ್ತು ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದೀಗ ಈ ಸಂಬಂಧ ಸೈನಾ ನೆಹ್ವಾಲ್ ಅವರು ಪ್ರತಿಕ್ರಿಯಿಸಿದ್ದಾರೆ.

'ಸಾಮಾನ್ಯವಾಗಿ ಇಂತಹ ದೊಡ್ಡ ತಪ್ಪುಗಳು ಈ ಮಟ್ಟದ ಹಂತದಲ್ಲಿ ಸಂಭವಿಸುವುದಿಲ್ಲ. ಇದು ಹೇಗೆ ಸಂಭವಿಸಿತು ಎಂಬುದು ಪ್ರಶ್ನಾರ್ಥಕ ಚಿಹ್ನೆ. ಯಾಕೆಂದರೆ ಆಕೆಗಾಗಿಯೇ ಒಂದು ದೊಡ್ಡ ತಂಡ ಕೆಲಸ
ಮಾಡುತ್ತಿರುತ್ತದೆ. ಆಕೆಗೆ ಅನೇಕ ತರಬೇತುದಾರರು, ಫಿಸಿಯೋಗಳು ಇದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೆಟ್ಟ ಅನುಭವವಾಗಿರುತ್ತದೆ. ನನಗೆ ಕುಸ್ತಿಯ ನಿಯಮವಾಳಿಗಳ ಬಗ್ಗೆ ಅಷ್ಟೇನೂ ತಿಳಿದಿಲ್ಲ. ಒಬ್ಬ ಅಥ್ಲೀಟ್ ಆಗಿರುವ ನನಗೆ ತುಂಬಾನೇ ನಿರಾಸೆಯಾಗಿದೆ.

"ವಿನೇಶ್ ಅವರಿಗೆ ಇದು ಮೊದಲ ಒಲಿಂಪಿಕ್ಸ್‌ ಅಲ್ಲ. ಇದು ಆಕೆಯ ಮೂರನೇ ಒಲಿಂಪಿಕ್ಸ್. ಕ್ರೀಡಾಪಟುವಾಗಿ, ಅವರು ನಿಯಮಗಳನ್ನು ತಿಳಿದಿರಬೇಕು. ಪದಕದ ಹೊಸ್ತಿಲಲ್ಲಿ ಇಂತಹ ದೊಡ್ಡ ತಪ್ಪಾಗಿದ್ದು ಹೇಗೆ ಅಂತಾ ನನಗೆ ಅರ್ಥವಾಗುತ್ತಿಲ್ಲ. ಅನುಭವಿ ಕುಸ್ತಿಪಟುವಾಗಿದ್ದು, ಆಕೆಯ ಕಡೆಯಿಂದಲೂ ತಪ್ಪಾಗಿದ್ದು, ಅವಳು ಈ ತಪ್ಪಿನ ಹೊಣೆಯನ್ನು ಹೊರಬೇಕು ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ತಪ್ಪಿನಿಂದಲೇ ವಿನೇಶ್ ಫೋಗಟ್ ಚಿನ್ನದ ಪದಕದ ಕನಸು ನುಚ್ಚು ನೂರಾಗಿದ್ದು