Select Your Language

Notifications

webdunia
webdunia
webdunia
Saturday, 5 April 2025
webdunia

ಕುಸ್ತಿ ಅಖಾಡಕ್ಕೆ ಗುಡ್‌ಬೈ ಹೇಳಿದ ವಿನೇಶ್‌ಗೆ ಬಜರಂಗ್‌ ಭಾವುಕ ಪೋಸ್ಟ್‌

Wrestler Bajrang Punia

Sampriya

ನವದೆಹಲಿ , ಗುರುವಾರ, 8 ಆಗಸ್ಟ್ 2024 (18:14 IST)
Photo Courtesy X
ನವದೆಹಲಿ: ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಅವರಿಗೆ ಬೆಂಬಲ ಸೂಚಿಸಿ ಟೊಕಿಯೋ ಒಲಿಂಪಿಕ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಸಂತೈಸಿದ್ದಾರೆ.

100ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಕೊನೆ ಹಂತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಿಂದ ವಿನೇಶ್ ಅವರನ್ನು ಅನರ್ಹ ಮಾಡಲಾಗಿದೆ.  ಇದಾದ ಬೆನ್ನಲ್ಲೇ ವಿನೇಶ್ ಅವರು ಕುಸ್ತಿ ಅಖಾಡಕ್ಕೆ ವಿದಾಯ ಘೋಷಣೆ ಮಾಡಿದರು.

ಇದಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಜರಂಗ್, 'ನೀವು ಸೋತಿಲ್ಲ, ಆದರೂ ಸೋಲಿಸಲಾಗಿದೆ. ನಮ್ಮ ಪಾಲಿಗೆ ನೀವು ಎಂದೆಂದಿಗೂ ಚಾಂಪಿಯನ್ ಆಗಿದ್ದೀರಿ. ಭಾರತದ ಪುತ್ರಿಯಾಗಿರುವ ನೀವು ನಮ್ಮ ದೇಶದ ಹೆಮ್ಮೆ' ಎಂದು ಕೊಂಡಾಡಿದ್ದಾರೆ.

ಮಗದೊಂದು ಪೋಸ್ಟ್‌ನಲ್ಲಿ ವಿನೇಶ್ ಅವರ ಹೋರಾಟದ ವಿಡಿಯೊವನ್ನು ಹಂಚಿಕೊಂಡಿರುವ ಬಜರಂಗ್, 'ದೇವರು ನಿಮ್ಮಂತಹ ಮಗಳನ್ನು ಪ್ರತಿ ಮನೆಗೂ ನೀಡಲಿ. ನೀವು ಎಂದೆಂದಿಗೂ ಕುಸ್ತಿಯ ದಿಗ್ಗಜೆಯಾಗಿ ಗುರುತಿಸಲ್ಪಡುವಿರಿ' ಎಂದು ಹೇಳಿದ್ದಾರೆ.

ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲು...

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿಗೆ ಅಕ್ರೆಡಿಟೇಶನ್ ಕಾರ್ಡ್‌ ಕೊಟ್ಟು ಪ್ಯಾರಿಸ್‌ನಲ್ಲಿ ಸಿಕ್ಕಿಬಿದ್ದ ಭಾರತ ಕುಸ್ತಿಪಟುಗೆ ನಿಷೇಧದ ಭೀತಿ