ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ವಕ್ಫ್ ಕಾಯಿದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಸೀರೆ ಅಂಗಡಿಯೊಂದನ್ನು ಸುಟ್ಟು ಭಸ್ಮ ಮಾಡಿದ್ದಾರೆ. ಈ ವಿಡಿಯೋ ನೋಡಿದ್ರೆ ನಿಮ್ಮ ಕರುಳು ಚುರುಕ್ ಎನ್ನುತ್ತದೆ.
ಮುರ್ಷಿದಾಬಾದ್ ಸೇರಿದಂತೆ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶಗಳಲ್ಲಿ ವಕ್ಫ್ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಲವೆಡೆ ಹಿಂದೂ ಧರ್ಮೀಯರ ಮನೆ, ಅಂಗಡಿಗಳ ಮೇಲೆ ದಾಳಿ ಮಾಡಲಾಗಿತ್ತು. ಹಲವರು ಭಯಗೊಂಡು ಮನೆ ಖಾಲಿ ಮಾಡಿದ್ದಾರೆ.
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸೀರೆ ಅಂಗಡಿಯೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸೀರೆ ಅಂಗಡಿಯನ್ನು ಸಂಪೂರ್ಣವಾಗಿ ಭಸ್ಮ ಮಾಡಲಾಗಿದೆ. ಇರುವ ಸೀರೆಗಳು ಸುಟ್ಟು ಹೋಗಿರುವುದನ್ನು ಕಾಣಬಹುದು. ಇಂತಹ ಹಲವು ಘಟನೆಗಳು ವಕ್ಫ್ ಪ್ರತಿಭಟನೆಯಲ್ಲಿ ನಡೆದಿವೆ. ಹಲವರು ಮನೆ, ಮಠ ಕಳೆದುಕೊಂಡಿದ್ದಾರೆ.