ಪುರಿ: ಒಡಿಶ್ಶಾದ ಪುರಿ ಜಗನ್ನಾಥ ಮಂದಿರ ಹಲವು ವಿಸ್ಮಯಗಳ ತಾಣ. ಇಂದು ಇಲ್ಲಿ ವಿಸ್ಮಯವೊಂದು ನಡೆದು ಹೋಗಿದೆ. ಕೇಸರಿ ವಸ್ತ್ರವನ್ನು ಹಿಡಿದುಕೊಂಡು ಗರುಡ ದೇವಾಲಯಕ್ಕೆ ಸುತ್ತು ಹಾಕುವ ವಿಡಿಯೋವೊಂದು ವೈರಲ್ ಆಗಿದೆ.
ಒಡಿಶ್ಶಾದ ಜಗನ್ನಾಥ ಮಂದಿರದಲ್ಲಿ ಈಗಲೂ ಶ್ರೀಕೃಷ್ಣನ ಹೃದಯ ಜೀವಂತವಾಗಿದೆ ಎಂಬ ನಂಬಿಕೆಯಿದೆ. ಇಲ್ಲಿ ಇನ್ನೂ ಅನೇಕ ವಿಸ್ಮಯಗಳಿವೆ. ಇದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಇದರ ನಡುವೆ ಈಗ ಗರುಡನ ಹಾರಾಟ ಎಲ್ಲರ ಕೌತುಕಕ್ಕೆ ಕಾರಣವಾಗಿದೆ.
ಕೇಸರಿ ವಸ್ತ್ರ ಹೊತ್ತುಕೊಂಡು ಗರುಡ ಜಗನ್ನಾಥ ಮಂದಿರದ ಕಳಶದ ಸುತ್ತಲೂ ಹಾರಿ ಬಳಿಕ ಸಮುದ್ರದ ಕಡೆಗೆ ಹಾರಿದ್ದು ಮಾಯವಾಗಿದೆ. ಈ ಒಂದು ವಿಸ್ಮಯದ ಕ್ಷಣ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ಸ್ವತಃ ಗರುಡ ದೇವನೇ ಪ್ರತ್ಯಕ್ಷವಾಗಿ ಶ್ರೀಕೃಷ್ಣನಿಗೆ ನಮಿಸಿ ಹೋಗಿರಬೇಕು ಎಂದು ಆಸ್ತಿಕರು ನಂಬಿದ್ದಾರೆ. ಇದೀಗ ಗರುಡನ ಆಗಮನ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.