Select Your Language

Notifications

webdunia
webdunia
webdunia
webdunia

ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೇ ಒಡಿಶಾದ ಪುರಿ ಜಗನ್ನಾಥ ದೇವಾಲಯದ ನಾಲ್ಕು ಬಾಗಿಲು ಭಕ್ತರಿಗಾಗಿ ಓಪನ್

Puri Jagannath

Krishnaveni K

ಪುರಿ , ಗುರುವಾರ, 13 ಜೂನ್ 2024 (11:02 IST)
ಪುರಿ: ಈ ವಿಧಾನಸಭೆಯಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಂತೇ ಒಡಿಶಾದಲ್ಲಿರುವ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರೆಯಲು ಅನುಮತಿ ನೀಡಲಾಗಿದೆ.

ಒಡಿಯಾದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೋಹನ್ ಚರಣ್ ಮಾಝಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಅವರು ಇಂತಹದ್ದೊಂದು ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ಮಾಝಿ ಗುರುವಾರದಿಂದಲೇ ಪುರಿಯ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ತೆರೆಯಲು ಆದೇಶ ನೀಡಿದ್ದಾರೆ.

ಅಲ್ಲದೆ  ದೇವಸ್ಥಾನದ ಅಭಿವೃದ್ಧಿಗಾಗಿ 500 ಕೋಟಿ ರೂ.ಗಳ ಅನುದಾನವನ್ನೂ ಘೋಷಿಸಿದ್ದಾರೆ. ಇದಕ್ಕಾಗಿ ನಿನ್ನೆಯೇ ಇಲ್ಲಿನ ಸಂಸದ ಸಂಬಿತ್ ಪಾತ್ರಾ ಮತ್ತು ನೂತನ ಸಚಿವರ ತಂಡವೊಂದು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಿ ದೇವಾಲಯದ ನಾಲ್ಕು ದ್ವಾರಗಳನ್ನು ತೆರೆಯುವ ಬಗ್ಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಅದನ್ನೀಗ ಪೂರೈಸಿದೆ.

ಇಲ್ಲಿವರೆಗೆ ದೇವಾಲಯಕ್ಕೆ ಭಕ್ತರಿಗೆ ಒಂದು ದ್ವಾರದ ಮೂಲಕ ಮಾತ್ರ ಪ್ರವೇಶ ಕಲ್ಪಿಸಲಾಯಿತು. ಕೋವಿಡ್ ಸಂದರ್ಭದಲ್ಲಿ ಅಂದಿನ ನವೀನ್ ಪಾಟ್ಯಾಯಕ್ ನೇತೃತ್ವದ ಸರ್ಕಾರ ಉಳಿದ ಗೇಟ್ ಗಳನ್ನು ಮುಚ್ಚಿತ್ತು. ಕೊವಿಡ್ ಬಳಿಕ ಎಲ್ಲಾ ದ್ವಾರಗಳನ್ನು ತೆರೆಯಬೇಕು ಎಂದು ಒತ್ತಾಯಿಸಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆ ಬಂದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ, ದೈನಂದಿನ ಬಳಕೆಯ ತರಕಾರಿ ಬೆಲೆ ಎಷ್ಟಿದೆ