Select Your Language

Notifications

webdunia
webdunia
webdunia
webdunia

ಪುರಿ ಜಗನ್ನಾಥ ದೇಗುಲದಲ್ಲಿ ಪಟಾಕಿ ಅವಘಡ: ಮೃತರ ಸಂಖ್ಯೆ 11ಕ್ಕೆ ಏರಿಕೆ

Fire Breaks

sampriya

, ಭಾನುವಾರ, 2 ಜೂನ್ 2024 (16:25 IST)
Photo By X
ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇಗುಲದ ಚಂದನ ಜಾತ್ರಾ ಮಹೋತ್ಸವ ವೇಳೆ ಸಂಭವಿಸಿದ್ದ ಪಟಾಕಿ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮೇ 29ರ ರಾತ್ರಿ ಜಗನ್ನಾಥ ದೇಗುಲದಲ್ಲಿ ಚಂದನ ಜಾತ್ರಾ ಮಹೋತ್ಸವ ನಡೆದಿತ್ತು. ಈ ವೇಳೆ ಭಕ್ತರ ಗುಂಪು ಪಟಾಕಿ ಸಿಡಿಸಿ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಮರದ ತುಂಡೊಂದು ಪಟಾಕಿ ರಾಶಿಗೆ ಬಿದ್ದು ಸ್ಫೋಟ ಸಂಭವಿಸಿದ್ದು, ಅವಘಡದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ.

ಇದೀಗ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಗಾಯಗೊಂಡಿರುವ 19 ಮಂದಿಗೆ ಪುರಿ ಭವನೇಶ್ವರ ಮತ್ತು ಕಟಕ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಇನ್ನೂ ಮೃತರ ಕುಟುಂಬವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿಯ ಪುರಿ ಲೋಕಸಭಾ ಅಭ್ಯರ್ಥಿ ಸಂಬಿತ್ ಪಾತ್ರಾ ಶನಿವಾರ ಸಂಜೆ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಮಾಧ್ಯಮಗಳ ಮತಗಟ್ಟೆಗಿಂತ ಜನರ ಮತಗಟ್ಟೆ ಮೇಲೆ ನಂಬಿಕೆ: ಪ್ರಿಯಾಂಕ್‌ ಖರ್ಗೆ