Select Your Language

Notifications

webdunia
webdunia
webdunia
webdunia

Viral Video: ಕ್ಲಾಸ್ ರೂಂ ಗೋಡೆಗೆ ದನದ ಸೆಗಣಿ ಹಚ್ಚಿದ ಪ್ರಿನ್ಸಿಪಾಲ್: ನೆಟ್ಟಿಗರ ರಿಯಾಕ್ಷನ್ ಏನು ನೋಡಿ

Delhi Principal

Krishnaveni K

ನವದೆಹಲಿ , ಮಂಗಳವಾರ, 15 ಏಪ್ರಿಲ್ 2025 (13:38 IST)
Photo Credit: X
ನವದೆಹಲಿ: ದೆಹಲಿಯ ಕಾಲೇಜೊಂದರ ಪ್ರಿನ್ಸಿಪಾಲ್ ಒಬ್ಬರು ಕ್ಲಾಸ್ ರೂಂ ಗೋಡೆಗಳಿಗೆ ದನದ ಸೆಗಣಿ ಹಚ್ಚಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೆಹಲಿಯ ಡಿಯು ಲಕ್ಷ್ಮೀಬಾಯಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಗೋಡೆಗಳಿಗೆ ಸುಣ್ಣ ಬಳಿಯುವಂತೆ ಪ್ರಾಂಶುಪಾಲೆ ದನದ ಸೆಗಣಿಯನ್ನು ಹಚ್ಚುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಆಕೆಗೆ ಇನ್ನೊಬ್ಬ ಪ್ರಾದ್ಯಾಪಕರೂ ಸಹಾಯ ಮಾಡಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ನಮ್ಮ ಸಂಸ್ಕೃತಿ ಪ್ರತೀಕ ಎಂದು ಕೊಂಡಾಡಿದರೆ ಮತ್ತೆ ಕೆಲವರು ಇದು ಮೂಢನಂಬಿಕೆಯ ಪರಮಾವಧಿ. ಇದು ಒಂದು ಕೋಮಿನ ಓಲೈಕೆ. ಶಿಕ್ಷಣ ಸಂಸ್ಥೆಗಳು ಧರ್ಮದಿಂದ ದೂರವಿರಬೇಕು ಎಂದಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಂಶುಪಾಲೆ ಪ್ರತ್ಯೂಷ್ ವತ್ಸಲಾ, ನಾವು ಮಾಡುತ್ತಿದ್ದ ಶೈಕ್ಷಣಿಕ ಸಂಶೋಧನಾ ಪ್ರಾಜೆಕ್ಟ್ ಭಾಗವಾಗಿ ಈ ಕೆಲಸ ಮಾಡಿದ್ದೇವೆ. ಸೆಗಣಿಗೆ ಬಿಸಿಲಿನ ತಾಪಮಾನ ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಮಾಡುತ್ತಿದ್ದೆವು. ಅದರ ಭಾಗವಾಗಿ ಗೋಡೆಗಳಿಗೆ ಸೆಗಣಿ ಹಚ್ಚಲಾಗಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Robert Vadra: ಖರೀದಿಸಿದ್ದು ಏಳೂವರೆ ಕೋಟಿಗೆ ಮಾರಿದ್ದು 55 ಕೋಟಿ: ಪ್ರಿಯಾಂಕ ಪತಿ ರಾಬರ್ಟ್ ವಾದ್ರಾಗೆ ಇಡಿ ಡ್ರಿಲ್