Select Your Language

Notifications

webdunia
webdunia
webdunia
webdunia

Arecanut price today: ಅಡಿಕೆ ಬೆಳೆಗಾರರಿಗೆ ನೆಮ್ಮದಿ ಕೊಡುವ ಸುದ್ದಿ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Arecanut

Krishnaveni K

ಬೆಂಗಳೂರು , ಗುರುವಾರ, 17 ಏಪ್ರಿಲ್ 2025 (10:53 IST)
ಬೆಂಗಳೂರು: ಅಡಿಕೆ ಬೆಳೆ ಕಡಿಮೆಯಾಗಿದ್ದರೂ ಬೆಲೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವುದು ಬೆಳೆಗಾರರಲ್ಲಿ ನೆಮ್ಮದಿ ತಂದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಏರಿಕೆಯಾಗಿದೆಯೇ, ಇಂದಿನ ದರ ಹೇಗಿದೆ ಇಲ್ಲಿದೆ ವಿವರ.

ಅಡಿಕೆಗೆ ಕಳೆದ ಕೆಲವು ದಿನಗಳಿಂದ ಬೆಲೆ ಏರಿಕೆಯಾಗುತ್ತಲೇ ಇತ್ತು. ಅಡಿಕೆ ಬೆಲೆ ಏರಿಕೆಯಾಗದೇ ಇದ್ದರೂ ಯಥಾಸ್ಥಿತಿಯಲ್ಲಿದ್ದೇ ಇದೆ. ಇಳಿಕೆಯಂತೂ ಆಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಹೊಸ ಅಡಿಕೆಗೆ ಇಂದೂ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ. ಅಡಿಕೆ ಬೆಲೆ ಮೊನ್ನೆಯಿಂದ ಇದೇ ರೀತಿ ಮುಂದುವರಿದಿದೆ.

ಹೊಸ ಫಟೋರ ದರ 345 ರೂ.ಗಳಷ್ಟಾಗಿದೆ. ಹಳೆ ಫಟೋರ ದರ 355 ರೂ. ಗಳಷ್ಟಿದೆ. ಹೊಸ ಉಳ್ಳಿ ದರ ಏರಿಕೆಯಾಗಿ ಗರಿಷ್ಠ 215 ರೂ., ಹಳೆ ಉಳ್ಳಿ ದರ 230 ಗಳಷ್ಟಾಗಿದೆ. ಹೊಸ ಕೋಕ ದರ 290 ರೂ., ಹಳೇ ಕೋಕ 300 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು. ಆದರೆ ಇಂದು ಕಾಳುಮೆಣಸು ದರ ಏರಿಕೆಯಾಗಿದೆ. ಇಂದು ಕಾಳುಮೆಣಸು ಗರಿಷ್ಠ ಬೆಲೆ 700 ರೂ.ಗಳಷ್ಟಾಗಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಲಕ್ಷದ ಸನಿಹದಲ್ಲಿ ಚಿನ್ನದ ಬೆಲೆ, ಇಂದಿನ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ