ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್ ಖುಷಿ. ಯಾಕೆಂದರೆ ಇಂದು ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ ಕಾಳುಮೆಣಸು ಬೆಲೆ ಕೊಂಚ ಇಳಿಕೆಯಾಗಿದೆ. ಇಂದಿನ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ನಿಂತ ನೀರಾಗಿತ್ತು. ಇಂದು ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಬೆಳೆಗಾರರ ಮೊಗದಲ್ಲಿ ಹರ್ಷ ತಂದಿದೆ. ನಿನ್ನೆ ಹೊಸ ಅಡಿಕೆ ಬೆಲೆ ಗರಿಷ್ಠ 430 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 475 ರೂ.ಗಳಷ್ಟಿತ್ತು. ಇಂದು ಹೊಸ ಅಡಿಕೆ ದರ ಮತ್ತು ಹಳೆ ಅಡಿಕೆ ದರ ತಲಾ 10 ರೂ.ಗಳಷ್ಟು ಏರಿಕೆಯಾಗಿದ್ದು ಕ್ರಮವಾಗಿ 440 ಮತ್ತು 485 ರೂ.ಗಳಾಗಿದೆ. ಡಬಲ್ ಚೋಲ್ ಅಡಿಕೆ ಬೆಲೆ 5 ರೂ. ಏರಿಕೆಯಾಗಿದ್ದು ಗರಿಷ್ಠ 500 ರೂ.ಗಳಷ್ಟಿದೆ.
ಹೊಸ ಫಟೋರ ದರ 5 ರೂ. ಏರಿಕೆಯಾಗಿ 320 ರೂ.ಗಳಷ್ಟಾಗಿದೆ. ಹಳೆ ಫಟೋರ 5 ರೂ. ಏರಿಕೆಯಾಗಿ 340 ರೂ. ಗೆ ಗಳಲ್ಲೇ ಇದೆ. ಹೊಸ ಉಳ್ಳಿ ದರ 5 ರೂ. ಏರಿಕೆಯಾಗಿ ಗರಿಷ್ಠ 185 ರೂ., ಹಳೆ ಉಳ್ಳಿ ದರವೂ 5 ರೂ. ಏರಿಕೆಯಾಗಿ 200 ರೂ. ಗಳಾಗಿದೆ. ಹೊಸ ಕೋಕ 10 ರೂ. ಏರಿಕೆಯಾಗಿದ್ದು 270 ರೂ., ಹಳೇ ಕೋಕ 10 ರೂ. ಏರಿಕೆಯಾಗಿ 280 ರೂ. ಗಳಾಗಿದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಇಂದು ಕೊಂಚ ನಿರಾಸೆಯಾಗಲಿದೆ. ಸತತ ಎರಡು ದಿನ ಏರಿಕೆಯಾಗಿತ್ತು. ಆದರೆ ಇಂದು ಕಾಳುಮೆಣಸು ದರ 15 ರೂ. ಇಳಿಕೆಯಾಗಿದ್ದು ಇಂದು ಗರಿಷ್ಠ 695 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಾಗಿದೆ.