ಬೆಂಗಳೂರು: ಯುಗಾದಿ, ರಂಜಾನ್ ಬಿಡುವಿನ ಬಳಿಕ ಅಡಿಕೆ ಬೆಳಗಾರರಿಗೆ ಈಗ ಬೆಲೆ ಏರಿಕೆಯ ಖುಷಿಯ ಸುದ್ದಿ ಸಿಕ್ಕಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ಹೆಚ್ಚಳವಾಗಿದೆ. ಇಂದಿನ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ನಿಂತ ನೀರಾಗಿತ್ತು. ಆದರೆ ಯುಗಾದಿ ಹಬ್ಬದ ಬಳಿಕ ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಇದು ಬೆಳಗಾರರ ಮೊಗದಲ್ಲಿ ನೆಮ್ಮದಿ ಮೂಡಿಸಿದೆ. ಇಂದು ಹೊಸ ಅಡಿಕೆ ಬೆಲೆ ಗರಿಷ್ಠ 430 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 475 ರೂ.ಗಳಷ್ಟಿದೆ. ಡಬಲ್ ಚೋಲ್ ಅಡಿಕೆ ಬೆಲೆ ಗರಿಷ್ಠ 495 ರೂ.ಗಳಷ್ಟಿದೆ.
ಹೊಸ ಫಟೋರ ದರ 315 ರೂ.ಗಳಷ್ಟಾಗಿದೆ. ಹಳೆ ಫಟೋರ ಕಳೆದ ವಾರದಂತೇ 335 ರೂ. ಗೆ ಗಳಲ್ಲೇ ಇದೆ. ಹೊಸ ಉಳ್ಳಿ ದರ ಗರಿಷ್ಠ 180 ರೂ., ಹಳೆ ಉಳ್ಳಿ 195 ರೂ. ಗಳಷ್ಟೇ ಇದೆ. ಹೊಸ ಕೋಕ 260 ರೂ., ಹಳೇ ಕೋಕ 10 ರೂ. ಏರಿಕೆಯಾಗಿ 270 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಈಗ ಬಂಪರ್. ಕಳೆದ ವಾರದವರೆಗೂ ದರ ಗರಿಷ್ಠ 680 ರೂ.ಗಳಷ್ಟಿತ್ತು. ಕಾಳುಮೆಣಸು ದರ ಇಂದು ಗರಿಷ್ಠ 710 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಾಗಿದೆ.