ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಇಂದು ಸಿಹಿ ಸುದ್ದಿ ಕಾದಿದೆ. ಈ ರೀತಿಯ ಅಡಿಕೆಗೆ ಇಂದು ಏರಿಕೆಯಾಗಿದೆ. ಇಂದು ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು ದರ ಎಷ್ಟಾಗಿದೆ ಇಲ್ಲಿದೆ ವಿವರ.
ಇತ್ತೀಚೆಗೆ ಮುಂಗಾರು ಪೂರ್ವ ಮಳೆಯಿಂದಾಗಿ ಅಡಿಕೆ ಬೆಳೆಗಾರರು ಬೆಳೆ ಹಾನಿ ಚಿಂತೆಯಲ್ಲಿದ್ದಾರೆ. ಅದರ ನಡುವೆ ಈಗ ಬೆಲೆ ಏರಿಕೆಯೂ ಕಾಣದೇ ಇರುವುದು ಚಿಂತೆಯಾಗಿತ್ತು. ಆದರೆ ಇಂದು ಹೊಡ ಫಟೋರ ಮತ್ತು ಹಳೆ ಫಟೋರ ದರ ಏರಿಕೆಯಾಗಿದೆ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.
ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಇದು ಇಂದೂ ಮುಂದುವರಿದಿದೆ. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಅದೀಗ 460 ರೂ.ಗೆ ತಲುಪಿದೆ. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ ಹೊಸ ಫಟೋರ ದರ 300 ರೂ.ಗೆ ಬಂದು ತಲುಪಿದ್ದುಹಳೆ ಫಟೋರ 335 ರೂ. ಗೆ ಏರಿಕೆಯಾಗಿದೆ.
ಕಾಳುಮೆಣಸು ದರ
ಕಾಳುಮೆಣಸಿನ ಬೆಲೆಯಲ್ಲೂ ಯಾವುದೇ ಹೆಚ್ಚು-ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ.