Select Your Language

Notifications

webdunia
webdunia
webdunia
webdunia

MP Salary hike: ಸಂಸದರ ವೇತನವೂ ಹೆಚ್ಚಳ: ಎಷ್ಟು ಏರಿಕೆ ಮಾಡಲಾಗಿದೆ, ಸಂಸದರ ವೇತನವೆಷ್ಟು ಇಲ್ಲಿದೆ ಡೀಟೈಲ್ಸ್

Parliament

Krishnaveni K

ಬೆಂಗಳೂರು , ಮಂಗಳವಾರ, 25 ಮಾರ್ಚ್ 2025 (11:57 IST)
ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಶಾಸಕರ ವೇತನ, ಭತ್ಯೆ ಹೆಚ್ಚಳ ಮಾಡಿತ್ತು. ಇದೀಗ ಕೇಂದ್ರ ಸರ್ಕಾರವೂ ಸಂಸದರ ವೇತನ, ಭತ್ಯೆ, ಪಿಂಚಣಿ ಹೆಚ್ಚಳ ಮಾಡಿದೆ. ಎಷ್ಟು ಏರಿಕೆ ಮಾಡಲಾಗಿದೆ, ಸಂಸದರ ವೇತನವೆಷ್ಟು ಇಲ್ಲಿದೆ ಡೀಟೈಲ್ಸ್.

 
ಸಂಸದೀಯ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಅದರಂತೆ ಸಂಸದರ ವೇತನ, ದಿನಭತ್ಯೆ ಮತ್ತು ಮಾಜಿ ಸಂಸದರ ಪಿಂಚಣಿಯನ್ನೂ ಹೆಚ್ಚಿಸಲಾಗಿದೆ. ಈ ಹೊಸ ವೇತನ ಏಪ್ರಿಲ್ 1 ರಿಂದಲೇ ಜಾರಿಗೆ ಬರಲಿದೆ.

ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಸಂಬಳ 1 ಲಕ್ಷ ರೂ. ಮತ್ತು ದಿನಭತ್ಯೆ 2,000 ರೂ.ಗಳಿತ್ತು. ಇದೀಗ ಸಂಸದರ ವೇತನವನ್ನು 24 ಸಾವಿರ ರೂ. ಹೆಚ್ಚಿಸಲಾಗಿದ್ದು, ಇನ್ನೀಗ ಸಂಸದರಿಗೆ 1.24 ಲಕ್ಷ ರೂ. ಸಂಬಳ ಸಿಗಲಿದೆ. ದಿನಭತ್ಯೆಯನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮಾಜಿ ಸಂಸದರ ಪಿಂಚಣಿಯನ್ನೂ ಏರಿಕೆ ಮಾಡಲಾಗಿದೆ. ಇದುವರೆಗೆ ಮಾಜಿ ಸಂಸದರಿಗೆ 25,000 ರೂ. ಪಿಂಚಣಿ ಸಿಗುತ್ತಿತ್ತು. ಇನ್ನೀಗ 31,000 ರೂ. ಸಿಗಲಿದೆ. 2018 ರಲ್ಲಿ ಕೊನೆಯ ಬಾರಿಗೆ ಸಂಸದರ ಪಿಂಚಣಿ, ವೇತನ ಹೆಚ್ಚಿಸಲಾಗಿತ್ತು. 2018 ರ ತಿದ್ದುಪಡಿ ಪ್ರಕಾರ ಸಂಸದರು ತಮ್ಮ ಕಚೇರಿ ವೆಚ್ಚಕ್ಕಾಗಿ 60,000 ರೂ., ಜನರನ್ನು ಭೇಟಿ ಮಾಡಲು 70,000 ರೂ., ಸಂಸತ್ತಿನ ಅಧಿವೇಶನ ಸಂದರ್ಭದಲ್ಲಿ ದಿನಕ್ಕೆ 2,000 ರೂ. ಭತ್ಯೆ ಪಡೆಯುತ್ತಾರೆ. ಈಗ ಈ ಭತ್ಯೆಗಳೂ ಹೆಚ್ಚಾಗಲಿದೆ.

ಇದಲ್ಲದೆ ಸಂಸದರಿಗೆ ತಮ್ಮ ಕುಟುಂಬದವರ ಜೊತೆಗೆ ವರ್ಷಕ್ಕೆ 34 ಬಾರಿ ಉಚಿತವಾಗಿ ವಿಮಾನ ಯಾನ ಮಾಡಲು, ಫೋನ್, ಇಂಟರ್ನೆಟ್ ಬಳಕೆಗೆ ಭತ್ಯೆ, ರೈಲಿನಲ್ಲಿ ಫಸ್ಟ್ ಕ್ಲಾಸ್ ಭೋಗಿಯಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 50 ಸಾವಿರ ಯೂನಿಟ್, 4 ಸಾವಿರ ಲೀಟರ್ ಉಚಿತ ನೀರು ಪಡೆಯುತ್ತಾರೆ. ಇದಲ್ಲದೆ 5 ವರ್ಷಗಳ ಕಾಲಾವಧಿಗೆ ಬಾಡಿಗೆ ರಹಿತವಾಗಿ ಮನೆ ಸಿಗುತ್ತದೆ. ಮನೆ ಪಡೆಯದವರಿಗೆ ಅದರ ಭತ್ಯೆ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಗ್ ರಾಜ್ ಗೆ ಈಗಲೂ ನಿತ್ಯವೂ ಸಾವಿರಾರು ಜನರ ಭೇಟಿ: ಈ ದಿನದವರೆಗೂ ವಿಶೇಷವೇ