ಮೀರತ್: ದೇಶವನ್ನೇ ಬೆಚ್ಚಿಬೀಳಿಸಿದ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್ ಭೀಕರ ಹತ್ಯೆ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಒಂದೊಂದೆ ಭಯಾನಕ ಕೃತ್ಯಗಳು ಬಯಲಿಗೆ ಬರುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹತ್ಯೆ ಆರೋಪಿ ಸಾಹಿಲ್ ಶುಕ್ಲಾನ ರೂಂನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಕೊಠಡಿಯ ತುಂಬಾ ಪೇಟಿಂಗ್ ಬಿಡಿಸಲಾಗಿದೆ. ಅದರಲ್ಲಿ ನಿಗೂಢ ಬರಹಗಳನ್ನು ಕಾಣಬಹುದು. ಮನೆ ತುಂಬಾ ಸಿಗರೇಟ್, ಸ್ನಾಕ್ಸ್ ಪ್ಯಾಕೇಟ್ ಚೆಲ್ಲಿರುವುದನ್ನು ಕಾಣಬಹುದು.
ತನಿಖಾಧಿಕಾರಿಗಳ ಮಾಹಿತಿಯಂತೆ ಶುಕ್ಲಾ ಅವರ ಕೋಣೆಯಲ್ಲಿ ತಾಂತ್ರಿಕ ಚಿಹ್ನೆಗಳು, ಪೈಶಾಚಿಕ ಗೀಚುಬರಹ ಮತ್ತು ನಿಗೂಢ ಬರಹಗಳನ್ನು ಕಂಡುಹಿಡಿದಿದ್ದಾರೆ. ಇದು ಮಾಟಮಂತ್ರಕ್ಕೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ.
ಹಿರಿಯ ಅಧಿಕಾರಿಯೊಬ್ಬರು, "ಇದು ನಿರ್ಲಕ್ಷ್ಯದ ಕೃತ್ಯವೇ ಅಥವಾ ಉದ್ದೇಶಪೂರ್ವಕ ದುಷ್ಕೃತ್ಯವೇ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಅಪರಾಧದ ಸ್ವರೂಪವನ್ನು ಗಮನಿಸಿದರೆ, ಎಲ್ಲಾ ಸಂಭಾವ್ಯ ಪುರಾವೆಗಳನ್ನು ಸಂರಕ್ಷಿಸುವುದು ನಿರ್ಣಾಯಕವಾಗಿದೆ" ಎಂದು ಹೇಳಿದರು.
ಇನ್ನೂ ಸೌರಭ್ ಹತ್ಯೆ ಪ್ರಕರಣ ಸಂಬಂಧ ಆತನ ಪತ್ನಿ, ಆರೋಪಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.