ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ದೇಶದ್ರೋಹಿ ಎಂದ ಕಾಮೆಡಿಯನ್ ಕಾಮ್ರಾಗೆ ಈಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಈಗ ಕೇಸ್ ದಾಖಲಾಗಿದೆ.
ಇತ್ತೀಚೆಗೆ ಯೂ ಟ್ಯೂಬರ್ ಗಳು, ಕಾಮೆಡಿಯನ್ ಗಳು ತಮ್ಮ ಕಾಮೆಂಟ್ ಗಳಿಂದಲೇ ವಿವಾದಕ್ಕೊಳಗಾಗುತ್ತಿದ್ದಾರೆ. ಇದೀಗ ಕಾಮೆಡಿಯನ್ ಕಾಮ್ರಾ ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂಧೆ ಬಗ್ಗೆ ಟೀಕೆ ಮಾಡಿದ್ದಾರೆ. ಇದನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದರು. ಅದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ಕಾಮ್ರಾ, ಏಕನಾಥ ಶಿಂಧೆಯವರನ್ನು ಅಪಹಾಸ್ಯ ಮಾಡಿದ್ದಾರೆ. ಪಕ್ಷ ವಿಭಜಜಿಸಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿದ್ದನ್ನು ಲೇವಡಿ ಮಾಡಿದ್ದಾರೆ. ಅಲ್ಲದೆ, ಶಿಂಧೆ ಓರ್ವ ದೇಶದ್ರೋಹಿ ಎಂದಿದ್ದಾರೆ.
ಅವರ ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಶಿವಸೇನೆ ಶಿಂಧೆ ಬಣದ ಕಾರ್ಯಕರ್ತರು ಕುನಾಲ್ ಕಾಮ್ರಾಗೆ ಕಾರ್ಯಕ್ರಮ ನೀಡಿದ್ದ ಹ್ಯಾಬಿಟೇಟ್ ಕ್ಲಬ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಮುರ್ಜಿ ಪಟೇಲ್ ಕಾಮೆಡಿಯನ್ ವಿರುದ್ಧ ದೂರು ದಾಖಲಿಸಿದ್ದಾರೆ.