Select Your Language

Notifications

webdunia
webdunia
webdunia
webdunia

ನಂದಿನಿ ಹಾಲಿದ ದರ ಏರಿಕೆ: ಇಂದು ಸಾರ್ವಜನಿಕರಿಗೆ ಮತ್ತೊಂದು ಶಾಕ್

Nandini Milk

Krishnaveni K

ಬೆಂಗಳೂರು , ಸೋಮವಾರ, 24 ಮಾರ್ಚ್ 2025 (10:21 IST)
ಬೆಂಗಳೂರು: ರಾಜ್ಯ ಸರ್ಕಾರ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಲು ಮುಂದಾಗಿದೆ. ಇಂದು ನಂದಿನಿ ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನವಾಗಲಿದೆ.

ಬಜೆಟ್ ಬಳಿಕ ನಂದಿನಿ ಹಾಲಿನ ದರ ಏರಿಕೆಯಾಗಲಿದೆ ಎಂದು ಈಗಾಗಲೇ ಕೆಎಂಎಫ್ ಸುಳಿವು ನೀಡಿತ್ತು. ಪ್ರತೀ ಲೀಟರ್ ಗೆ 5 ರೂ.ಗಳಷ್ಟು ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಬಜೆಟ್ ಬಳಿಕ ತೀರ್ಮಾನ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿತ್ತು.

ಅದರಂತೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದ್ದು, ಹಾಲು ಒಕ್ಕೂಟಗಳ ಜೊತೆ ದರ ಏರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೇವು, ಆಹಾರ, ಕೂಲಿ ಖರ್ಚುಗಳು ಹೆಚ್ಚಾಗಿರುವುದರಿಂದ ಹಾಲಿನ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಸರ್ಕಾರ ಇಂದು ಈ ಬಗ್ಗೆ ತೀರ್ಮಾನಿಸಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೂಡಾ ಹಾಲಿನ ದರ ಏರಿಕೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ ಬೀಳುವುದು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಗತ್ ಸಿಂಗ್ ಜೈಲಿನಲ್ಲಿ ಬರೆದಿದ್ದ ಪತ್ರ ಬೆಂಬಲಿಗರಿಗೆ ನೀಡುತ್ತಿದ್ದರು, ಆದರೆ ನಾನು ಬರೆದ ಪತ್ರ ಸಿಗುತ್ತಿರಲಿಲ್ಲ: ಕೇಜ್ರಿವಾಲ್